ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರಿಗೆ ಮನವಿ

ಭಟ್ಕಳ: ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರಿಗೆ ಮನವಿ

Thu, 10 Dec 2009 03:11:00  Office Staff   S.O. News Service
ಭಟ್ಕಳ, ಡಿಸೆಂಬರ್ 9:ಬಿಜೆಪಿ ನೇತೃತ್ವದ ಸರಕಾರವು ತನ್ನ ಜನವಿರೋಧಿ ನೀತಿಯಿಂದಾಗಿ ಅದು ವೈಫಲ್ಯಗೊಂಡಿದೆ ಬಳ್ಳಾರಿಯ ಗಣಿ ದಣಿಗಳು ಕರ್ನಾಟಕದ ಗಡಿಯನ್ನೆ ಅಳಿಸಹೊರಟಿದ್ದು ಸರಕಾರ ಇದಕ್ಕೆ ಸಾತ್ ನೀಡುತ್ತಿದ್ದು ಈ ಸರಕಾರದ ವೈಫಲ್ಯಗಳನ್ನು ಬಲವಾಗಿ ವೀರೋಧಿಸಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಶಾಸಕ ಜೆ.ಡಿ.ನಾಯ್ಕ ರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿತು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯು ಅವ್ಯಾಹತವಾಗಿ ನಡೆಯುತ್ತಿದ್ದರೂ ಸರಕಾರವು ಅದನ್ನು ತಡೆಯುವ ಗೋಜಿಗೆ ಹೋಗದೆ ಕಣ್ಣು ಮುಚ್ಚಿಕುಳಿತಿದೆ ಎಂದು ಆರೋಪಿಸಿದ ಶಾಸಕರು ಗಡಿ ಒತ್ತುವರಿ ಆಪಾದನೆಯನ್ನು ಎದುರಿಸುತ್ತಿರುವ ರಾಜ್ಯದ ಮೂವರು ಮಂತ್ರಿಗಳಾದ ಕರುಣಾಕರ್ ರೆಡ್ಡಿ, ಜನಾರ್ದನ ರೆಡ್ಡಿ, ಹಾಗೂ ಶ್ರೀರಾಮುಲು ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಬೇಕೆಂದು ಅವರು ಆಗ್ರಹಿಸಿದರು. 
 
ಅಕ್ರಮ ಗಣಿಗಾರಿಕೆಯನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ ಅವರು ಈ ಕುರಿತು ಸಹಾಯಕ ಕಮಿನಷರ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಅರ್ಪೀಸಿದರು. ಮನವಿಯಲ್ಲಿ ಬಿಜೆಪಿ ಸರಕಾರವು ಕಳೆದ ಒಂದು ವರ್ಷದಲ್ಲಿ ಯಾವುದೆ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳಲಿಲ್ಲ ಅದು ನಮ್ಮ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯನ್ನು ಎಬ್ಬಿಸಿದೆ, ದಿನದ ೨೪ ಗಂಟೆ ರೈತರಿಗೆ ವಿದ್ಯುತ್ ನೀಡುವ ಭರವಸೆಯನ್ನು ನೀಡಿದ್ದ ಬಿಜೆಪಿ ಈಗ ಅದನ್ನು ಸುಳ್ಳು ಮಾಡಿದ್ದು ವಿದ್ಯುತ್ ದರವನ್ನು ಏಕಾ‌ಏಕಿಯಾಗಿ ಏರಿಸುವುದರ ಮೂಲಕ ರಾಜ್ಯದ ಜನತೆಗೆ ಹೊರಲಾರದ ಹೊರೆಯನ್ನು ಹಾಕಿದೆ, ರಾಜ್ಯದ ೧೫ ಜಿಲ್ಲೆಗಳಲ್ಲಿ ಅತಿವೃಷ್ಟಿ, ಹಾಗೂ ೮೬ ತಾಲೂಕುಗಳಲ್ಲಿ ಅನಾವೃಷ್ಟಿಯಿಂದಾಗಿ ಜನರ ಬದುಕು ದುಸ್ತರವಾಗಿರುವಾಗ ರಾಜ್ಯ ಸರ್ಕಾರವು ತನ್ನ ಆಂತರಿಕ ಗೊಂದಲ ಹಾಗೂ ಕಚ್ಚಾಟದಲ್ಲಿ ನಿರತವಾಗಿದ್ದು ಯಾವು ಪರಿಹಾರ ಕಾರ್ಯವನ್ನು ಕೈಗೊಳ್ಳದೆ ಅಲ್ಲಿಯೂ ಸಹ ಭೃಷ್ಟತೆಯನ್ನು ತೋರಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
 
ಈ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗೈ ಅಧ್ಯಕ್ಷ ಸುಬ್ರಾಯ ನಾಯ್ಕ, ಮಾಜಿ ಅಧ್ಯಕ್ಷ ರಾಮ ಮೊಗೇರ್, ಗಣಪತಿ ನಾಯ್ಕ, ಈರಪ್ಪ ಗರ್ಡಿಕರ್, ತಾ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಗೊಂಡ, ತಾ.ಪಂ ಸದಸ್ಯೆ ಬಿಬಿ ಆಯಿಶಾ, ಮಹಿಳಾ ಕಾಂಗೈ ಅಧ್ಯಕ್ಷೆ ದೇವಿ ನಾಯ್ಕ, ಅಬ್ದುಲ್ ಮಾಜಿದ್ ಕೋಲಾ, ಮಸೂದ್, ಸೋಮಯ್ಯಗೊಂಡ ಮುಂತಾದವರು ಭಾಗವಹಿಸಿದ್ದರು,


Share: