ಬೆಂಗಳೂರು, ನ.೧೦: ನಾಡಿನ ಅಮೂಲ್ಯ ಅರಣ್ಯ ಮತ್ತು ಖನಿಜ ಸಂಪತ್ತು ಕೆಲವರ ಕೈಗೆ ಸಿಲುಕಿ ಲೂಟಿಯಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದರೂ ಅದನ್ನು ರಕ್ಷಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಯಡಿಯೂರಪ್ಪ ವಿಷಾದಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಗಣಿದೊರೆಗಳನ್ನು ಟೀಕಿಸಿದ್ದಾರೆ.
ಬೆಂಗಳೂರಿನ ಅರಣ್ಯ ಭವನದಲ್ಲಿ ಮಂಗಳವಾರ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಿಬ್ಬಂದಿಗಳ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ನಾನು ಎಂದು ಯೋಜಿಸುವವರು ಒಂದು ಕಡೆ, ನನಗಾಗಿ ದೇಶ ಎನ್ನುವ ಬಣ ಇನ್ನೊಂದು ಕಡೆ. ಇದರಿಂದ ರಾಷ್ಟ್ರ ಸಂದಿಗ್ಧ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಕಳೆದ ೧೫ ದಿನಗಳ ಹಿಂದೆ ಸೃಷ್ಟಿಯಾಗಿದ್ದ ಬಿಜೆಪಿ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ, ಗಣಿಧಣಿಗಳ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಜನಪ್ರತಿನಿಧಿಗಳ ವರ್ತನೆಯಿಂದ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ. ದೇಶವನ್ನು ಮುನ್ನೆಡೆಸುವವರೆ ಈ ರೀತಿ ವರ್ತಿಸಿದರೆ ಏನು ಮಾಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅವರು, ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬರುತ್ತಿದೆ. ನಮ್ಮನ್ನೇ ನಂಬಿದವರು ನೆರೆಯಿಂದ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಹೋಗಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಜನ ನಮ್ಮ ಮಾಲಕರು ಎನ್ನುವ ಭಾವನೆ ಬರುವವರೆಗೂ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಇತ್ತೀಚಿನ ಬೆಳವಣಿಗೆಗಳು ಚುನಾಯಿತ ಪ್ರತಿನಿಧಿಗಳ ಮೇಲಿನ ನಂಬಿಕೆ, ವಿಶ್ವಾಸವನ್ನು ಕಡಿಮೆ ಮಾಡಿವೆ. ಕೆಲವರಿಗಂತೆ ಜನರ ಬಗ್ಗೆ ಚಿಂತಿಸುವ ಪರಿಜ್ಞಾನವೇ ಇಲ್ಲದಂತಾಗಿದೆ. ಶ್ರೀಗಂಧದ ಬೀಡೆಂದು ಗುರುತಿಸಿಕೊಂಡಿರುವ ಅರಣ್ಯ ಪ್ರದೇಶ ದುರುಪಯೋಗವಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಉಳಿಯಬೇಕು, ನಾಡಿನ ಜನತೆಗೆ ರಕ್ಷಣೆ ಸಿಗಬೇಕು. ಇದಕ್ಕಾಗಿ ಮತ್ತಷ್ಟು ಶಕ್ತಿಕೊಡು ಎಂದು ವೈಷ್ಣೋದೇವಿಯನ್ನು ಪ್ರಾರ್ಥಿಸಿದ್ದೇವೆ. ಒಗ್ಗಟ್ಟಿನಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಸಂದಿಗ್ಧ ಸ್ಥಿತಿ ಇದಾಗಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ. ಇತ್ತೀಚಿನ ರಾಜಕೀಯ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಯನ್ನು ಬಿಟ್ಟು ಇತರ ವಿಷಯಗಳಿಗೆ ಆದ್ಯತೆ ನೀಡುವಂತೆ ಮಾಡಿದ್ದು ತಮಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು.
ಅಧಿಕಾರಿಗಳು ಧೃತಿಗೇಟುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಹದಿನೆಂಟು ತಿಂಗಳಲ್ಲಿ ಕೆಲವರಿಗೆ ಅಸಮಾಧಾನದಿಂದ ಮಾತನಾಡಿದ್ದೇನೆ. ಇವೆಲ್ಲವನ್ನೂ ಮರೆತು ಒಟ್ಟಾಗಿ ನಾಡಿನ ಅಭಿವೃದ್ಧಿ ಶ್ರಮಿಸೋಣ. ಕೆಲ ದಿನಗಳಲ್ಲಿ ನಿಮ್ಮನ್ನು ಬೇಡಿಕೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಭೆ ನಡೆಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು.
ಅರಣ್ಯ ಇಲಾಖೆಯ ಪ್ರಧಾನ ಸಂರಕ್ಷಣಾಧಿಕಾರಿ ಎಸ್.ನಾಗರಾಜ್, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತಹೆಗಡೆ ಅಶಿಸರ, ಮೈಸೂರು ಪೇಪರ್ ಮಿಲ್ಸ್‌ನ ಅಧ್ಯಕ್ಷ ಅರಗ ಜ್ಞಾನೇಂದ್ರ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮೀರಾಸಕ್ಸೇನಾ ಮತ್ತಿತರರು ಹಾಜರಿದ್ದರು.