ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಝೀನತ್ ಬಕ್ಷ್ ಯತೀಂ ಖಾನ ಮಕ್ಕಳ ಪ್ರತಿಭಾ ಕಾರ್ಯಕ್ರಮ

ಝೀನತ್ ಬಕ್ಷ್ ಯತೀಂ ಖಾನ ಮಕ್ಕಳ ಪ್ರತಿಭಾ ಕಾರ್ಯಕ್ರಮ

Mon, 03 May 2010 16:05:00  Office Staff   S.O. News Service

ಝೀನತ್ ಬಕ್ಷ್ ಯತೀಂ ಖಾನ ಮಕ್ಕಳ ಪ್ರತಿಭಾ ಕಾರ್ಯಕ್ರಮ

ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನ ವತಿಯಿಂದ ಯತೀಂ ಮಕ್ಕಳ ಪ್ರತಿಭಾ ಕಾರ್ಯಕ್ರಮವು ಇತ್ತೀಚೆಗೆ ಯತೀಂ ಖಾನದ ಸಭಾಂಗಣದಲ್ಲಿ ನಡೆಯಿತು. ಬೂಬುಕ ಜುಮಾ ಮಸೀದಿಯ ಇಮಾಮ್ ವೌಲಾನ ಸಿರಾಜುದ್ದೀನ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಕೆ. ಅಶ್ರಫ್ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಎಂ.ಬಶೀರ್ ಅಹ್ಮದ್ ಸ್ವಾಗತಿಸಿದರು. ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಮಕ್ಕಳ ಪ್ರತಿಭಾ ಕಾರ್ಯಕ್ರಮ ನೆರವೇರಿಸಿದರು. ಸಭೆಯಲ್ಲಿ ಕೋಶಾಧಿಕಾರಿ ಹಾಜಿ ಮನ್ಸೂರ್ ಅಹ್ಮದ್, ಜೊತೆ ಕಾರ್ಯದರ್ಶಿ ಎ.ಆರ್. ಬಶೀರ್, ಮ್ಯಾನೇಜರ್ ಹಾಜಿ ಎ.ಅಬ್ದುಲ್ ಅಝೀಝ್, ಸದಸ್ಯರಾದ ಹಾಜಿ ಕೆ.ಅಬ್ದುಲ್ ಅಝೀಝ್, ಹಾಜಿ ಎ.ಇಬ್ರಾಹೀಂ ಬಾವಾ, ಹಾಜಿ ಟಿ.ಮುಸ್ತಫಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಹಾಜಿ ಕೆ.ಎಂ.ಹೈದರ್ ವಂದಿಸಿದರು.



Share: