ಭಟ್ಕಳ, ಫೆಬ್ರವರಿ೧೯:ಇಲ್ಲಿನ ಸಾಗರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಗ್ನಿಶಾಮಕ ದಳದ ಕಾರ್ಯಲಯದ ಕಟ್ಟಡವನ್ನು ಗುರುವಾರದಂದು ಶಾಸಕ ಜೆ.ಡಿ.ನಾಯ್ಕ ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಎಂಟು ವರ್ಷಗಳ ಹಿಂದೆ ಕಟ್ಟಡ ಉದ್ಘಾಟನೆಗೊಂಡಿದ್ದರೂ ವಿವಿಧ ಕಾರಣಗಳಿಗಾಗಿ ಅಗ್ನಿಶಾಮಕ ದಳದವರು ಬಾಡಿಗೆ ಕಟ್ಟಡದಲ್ಲಿಯೇ ಇರುವಂತಾಗಿತ್ತು. ಆದರೆ ಇಂದು ಸ್ವಂತ ಕಟ್ಟಡದಲ್ಲಿಯೇ ಅಗ್ನಿಶಾಮಕ ದಳದವರು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಭಟ್ಕಳಕ್ಕೆ ಅಗ್ನಿಶಾಮಕ ಸೇವೆ ಅಗತ್ಯವಾಗಿದ್ದು,ನಗರದ ಮಧ್ಯದಲ್ಲೇ ಕಟ್ಟಡ ಇರುವುದರಿಂದ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾದಂತಾಗಿದೆ ಎಂದರು. ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಎಚ್ ಎನ್ ವರದರಾಜ ಮಾತನಾಡಿ ಭಟ್ಕಳದಲ್ಲಿ ಎಂದರು. ೩.೫ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಅಗ್ನಿಶಾಮಕ ಕಟ್ಟಡಗಳನ್ನು ನಿರ್ಮಿಸಲುದ್ದೇಶಿಸಲಾಗಿದೆ. ಇದರಲ್ಲಿ ೨೪ ಸಿಬ್ಬಂದಿಗಳಿಗೆ ವಸತಿಗೃಹವೂ ಸೇರಿದೆ.
ಅಗ್ನಿಶಾಮಕ ದಳದ ಸ್ವಂತ ಕಟ್ಟಡ ನಿರ್ಮಾಣಗೊಂಡು ಹಲವಾರು ವರ್ಷಕಳೆದರೂ ಅದಕ್ಕೆ ಉದ್ಘಾಟನೆಗೊಳ್ಳವ ಯೋಗ ಲಭಿಸಿರಲಿಲ್ಲ. ಕೆಲವೊಂದು ಕಾನೂನು ತೊಡಕುಗಳಿಂದಾಗಿ ಅದು ಸಾಧ್ಯವಾಗಿರಲ್ಲಿ ಇಲ್ಲನ ಶಾಸಕರ ಮುತುವರ್ಜಿಯಿಂದಾಗಿ ಅದಕ್ಕೆ ಉದ್ಘಾಟನೆಗೊಳ್ಳುವ ಯೋಗ ಲಭಿಸಿದೆ. ಈ ಕುರಿತು ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಸ್ಮರಿಸಬಹದು. ಅಂತೋ ಇದಕ್ಕೀಗ ಉದ್ಘಾಟನೆಯ ಯೋಗ ಲಭಿಸಿದ್ದು ಜನರಲ್ಲಿ ಹರ್ಷವನ್ನುಂಟು ಮಾಡಿದೆ.
ಈ ಹಿಂದೆ ಯಲ್ವಡಿಕವೂರು ಗ್ರಾಮಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ತಾತ್ಕಾಲಿಕ ಕಟ್ಟಡಲ್ಲಿ ಅದು ಕಾರ್ಯನಿರ್ವಹಿಸುತ್ತಿತ್ತು. ಹಲವಾರು ವಿಘ್ನಗಳ ಮದ್ಯೆಯು ಅಗ್ನಿಶಾಮಕ ದಳವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಸಿದ್ದು ಅದು ಜನರ ಪ್ರಶಂಸೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ತಿಪ್ಪೇಸ್ವಾಮಿ, ಭಟ್ಕಳ ಘಟಕದ ಮುಖ್ಯಾಧಿಕಾರಿ ವೆಂಕಟ್ರಮಣ ಮೊಗೇರ ಮುಂತಾದವರು ಉಪಸ್ಥಿತರಿದ್ದರು.
ಭಟ್ಕಳ ತಾಲೂಕಿನಾದ್ಯಂತ ಪದೇ ಪದೇ ಹಲವಾರು ಬೆಂಕಿ ಮತ್ತಿತರ ಅನಾಹುತ ಘಟನೆಗಳು ಜರುಗುತ್ತಿದ್ದು ಅಗ್ನಿಶಾಮಕ ದಳವು ಇನ್ನು ಉತ್ತಮ ರೀತಿಯಲ್ಲಿ ಸ್ಪಂಧಿಸಬೇಕಾಗಿದೆ ಎನ್ನವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.