ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು":ಡಿವೈ‌ಎಫ್‌ಐನ 9ನೆ ಮಂಗಳೂರು ನಗರ ಸಮ್ಮೇಳನ

ಮಂಗಳೂರು":ಡಿವೈ‌ಎಫ್‌ಐನ 9ನೆ ಮಂಗಳೂರು ನಗರ ಸಮ್ಮೇಳನ

Sat, 02 Jan 2010 02:36:00  Office Staff   S.O. News Service
, ಜನವರಿ ೧: ಡಿವೈ‌ಎಫ್‌ಐನ 9ನೆ ಮಂಗಳೂರು ನಗರ ಸಮ್ಮೇಳನ ಜನವರಿ ೧೦ರಂದು ನಗರದ ಉರ್ವಾಸ್ಟೋರ್‌ನಲ್ಲಿ ನಡೆಯಲಿದ್ದು, ಅದರ ಪ್ರಚಾರಾರ್ಥ ಇಂದು ಹಮ್ಮಿಕೊಳ್ಳಲಾದ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಡಿವೈ‌ಎಫ್‌ಐನ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್‌ರವರು ಡಿವೈ‌ಎಫ್‌ಐ ಧ್ವಜವನ್ನು ಸಂಘಟನೆಯ ನಗರ ಉಪಾಧ್ಯಕ್ಷ ಇಮ್ತಿಯಾಝ್‌ರವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.  

ಈ ಸಂದರ್ಭ ಡಿವೈ‌ಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ನಾಯಕರಾದ ದಯಾನಂದ ಶೆಟ್ಟಿ, ರಮೇಶ್ ಕುಮಾರ್, ಮಹಾಬಲ, ಎಸ್‌ಎಫ್‌ಐನ ಪ್ರಶಾಂತ್ ಆಚಾರ್, ಜೀವನ್‌ರಾಜ್ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು. ರ‍್ಯಾಲಿಯು ರಾವ್ ಆಂಡ್ ರಾವ್ ಸರ್ಕಲ್, ಲೇಡಿಗೋಶನ್, ಜ್ಯೋತಿ, ಪಿವಿ‌ಎಸ್ ಮಾರ್ಗವಾಗಿ ಉರ್ವಾಸ್ಟೋರ್‌ನಲ್ಲಿ ಸಮಾರೋಪಗೊಂಡಿತು

Share: