ಬೆಂಗಳೂರು, ಅ.೧೬: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಹೆಚ್ಚಿನ ಸಂಪನ್ಮೂಲ ಕ್ರೋಡಿಕರಿಸುವ ಉದ್ದೇಶದಿಂದ ಸಚಿವರು, ಸಚಿವ ಸ್ಥಾನಮಾನ ಹೊಂದಿರುವ ಅಧಿಕಾರೇತರ ಸದಸ್ಯರು ಮುಂತಾದವರು ಸಾಮಾನ್ಯ ದರ್ಜೆಯ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಇದೇ ಸಂದರ್ಭದಲ್ಲಿ ವೆಚ್ಚ ಕಡಿತಕ್ಕಾಗಿ ಒಂಬತ್ತು ಅಂಶಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಸುಸ್ಥಿತಿಗೆ ತರಲು ಸಂಪನ್ಮೂಲ ಕ್ರೋಡಿಕರಿಸುವುದು ಅಗತ್ಯವಾಗಿದೆ. ಆದ್ದರಿಂದ ಸರಕಾರಿ ವೆಚ್ಚದಲ್ಲಿ ಅದರಲ್ಲೂ ಯೋಜನೇತರ ಬಾಬ್ತಿನಲ್ಲಿ ಮಿತವ್ಯಯ ಪಾಲಿಸಬೇಕಾಗಿರುವುದರಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇಂದಿನಿಂದಲೆ ಜಾರಿಗೊಳಿಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿರುವ ಸಮಿತಿ ಕೊಠಡಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಿದ ನಂತರ ಏರ್ಪಡಿಸಿದ್ಧ ಅವರು ಮಾತನಾಡಿದರು.
ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ ಸೇರಿದಂತೆ ರಾಜ್ಯ ಸರಕಾರದ ಹಾಗೂ ಸಾರ್ವಜನಿಕ ಉದ್ದಿಮೆಗಳ ಎಲ್ಲ ಅಧಿಕಾರಿಗಳು ಸಾಮಾನ್ಯ ದರ್ಜೆಯಲ್ಲಿ ವಿಮಾನ ಪ್ರಯಾಣಿಸಬೇಕು. ಈ ಆದೇಶ ಸಚಿವರು ಮತ್ತು ಸಚಿವ ಸ್ಥಾನಮಾನ ಹೊಂದಿರುವ ಅಧಿಕಾರೇತರ ಸದಸ್ಯರು ಮತ್ತು ಉಳಿದವರಿಗೆ ಅನ್ವಯವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಮಿತವ್ಯಯ ಪಾಲಿಸುವ ಕ್ರಮಗಳಲ್ಲಿ ಸರಕಾರದ ಎಲ್ಲ ಇಲಾಖೆಗಳಲ್ಲಿ ಹೊಸ ಹುದ್ದೆಗಳನ್ನು ಸೃಜಿಸುವುದಾಗಲಿ ಅಥವಾ ಭರ್ತಿ ಮಾಡುವುದನ್ನು ತಡೆಹಿಡಿಯಬೇಕು. ಕೆಲವು ವಿಶೇಷ ಪ್ರಕಾರಣಗಳಲ್ಲಿ ಅಂದರೆ ಯೋಜನಾ ಕಾರ್ಯಕ್ರಮ ಅಥವಾ ಕೇಂದ್ರ ಸಹಾಯದ ಕಾರ್ಯಕ್ರಮವಾಗಿದ್ದಲ್ಲಿ ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಪರಿಶೀಲನೆಗೆ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಹಳೆಯ ವಾಹನಗಳನ್ನು ಬದಲಾಯಿಸುವುದು ಒಳಗೊಂಡಂತೆ ಹೊಸ ವಾಹನಗಳನ್ನು ಖರೀದಿಸುವುದನ್ನು ತಡೆಹಿಡಿಯಬೇಕು.ಸಹಾಯಾನುದಾನಕ್ಕೆ ಒಳಪಡಿಸುವ ಯಾವುದೆ ಹೊಸ ಪ್ರಕರಣಗಳನ್ನು ಪರಿಗಣಿಸಬಾರದು. ೨೦೦೯-೧೦ನೆ ಸಾಲಿನಲ್ಲಿ ಇಲಾಖೆಗಳು ತಮ್ಮ ಯೋಜನೇತರ ವೆಚ್ಚದಲ್ಲಿ ಶೇ.೧೦ರಷ್ಟು ಕಡಿತ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.
ವಿದೇಶಿ ನೆರವಿನ ಒಡಂಬಡಿಕೆಗೆ ಸಂಬಂಧಿಸಿದ ಪ್ರಕರಣಗಳ ಹೊರತಾಗಿ ಯಾವುದೆ ವಿದೇಶ ಪ್ರವಾಸವನ್ನು ರಾಜ್ಯ ಸರಕಾರದ ವೆಚ್ಚದಲ್ಲಿ ಕೈಗೊಳ್ಳಬಾರದು. ಸ್ಟಾರ್ ಹೋಟೆಲ್‌ಗಳಲ್ಲಿ ಅಧಿಕೃತ ಸಭೆ ಹಾಗೂ ಕಾರ್ಯಾಗಾರಗಳನ್ನು ಮಾಡಬಾರದು.
ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳಿಗೆ ಉನ್ನತ ದರ್ಜೆಯ ವಿಮಾನ ಪ್ರಯಾಣ ಮಾಡಲು ನೀಡಿರುವ ಪರವಾನಿಗೆಯ್ನನು ಹಿಂಪಡೆಯಲು ಆದೇಶಿಸಿರುವುದಾಗಿ ಅವರು ತಿಳಿಸಿದರು.