ರಿಯಾದ್, ಅಕ್ಟೋಬರ್ 11: ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಕಾರ್ಯನಿರತವಾಗಿರುವ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ ಸಂಘಟನೆ ಇತ್ತೀಚೆಗೆ ಈದ್ ಮಿಲನ್ ಕಾರ್ಯಕ್ರಮವೊಂದರಲ್ಲಿ ತನ್ನ ಸದಸ್ಯರ ಮಿಲನ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.

ನಗರದ ಬತ್ಹಾದಲ್ಲಿರುವ ಹಾಫ್ ಮೂನ್ ರೆಸ್ಟೊರೆಂಟ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ಫಜ್ಲುರ್ ರೆಹಮಾನ್ ಕೋಲ್ಕರ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು. ಎಂ.ಹೆಚ್. ತಾಹಿರ್ ರವರು ನೆರೆದವರನ್ನು ಸಭೆಗೆ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ಹೊರತಾಗಿ ಹಲವು ಆಟೋಟ್ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಆಟಗಳು ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಪ್ರಾಯೋಜಿಸಲಾಗಿದ್ದ ಹಲವು ಬಹುಮಾನಗಳು ಅದೃಷ್ಟಶಾಲಿಗಳಿಗೆ ಒಲಿದವು.

ಚಿತ್ರ, ವರದಿ: ಫಜ್ಲುರ್ ರೆಹಮಾನ್, ಪ್ರಧಾನ ಕಾರ್ಯದರ್ಶಿ