ಪ್ರಧಾನಿ ಮೋದಿ ಚುನವಾಣ ಪ್ರಚಾರ ನಡೆಸಿದ ನಂತರ ಶಿರಸಿಯಲ್ಲಿ ಕಾಂಗ್ರೇಸ್ ಮುಖಂಡರ ಮನೆ ಮೇಲೆ ಐಟಿ ದಾಳಿ?
ಶಿರಸಿ: ೨೦೨೪ ರ ಲೋಕಸಭಾ ಚುನಾಚಣೆ ಇನ್ನೇನು ಕೆಲ ದಿನಗಳು ಬಾಕಿ ಇದ್ದಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಾಂಗ್ರೆಸ್ ಮುಖಂಡ ಸೇರಿದಂತೆ ಆರು ಉದ್ಯಮಿಗಳ ಮನೆಗಳ ಮೇಲೆ ಮೇಲೆ ಶುಕ್ರವಾರ ಬೆಳಗ್ಗೆ ಎಕಾಏಕಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾಗಿ ವರದಿಯಾಗಿದೆ.
ಇತ್ತೀಚೆಗೆ ಪ್ರಧಾನಿ ಮೋದಿಯವರು ಶಿರಸಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು ಇದರ ಬೆನ್ನ ಹಿಂದೆಯೇ ಈ ದಾಳಿ ನಡೆದಿರುವುದು ಸಾರ್ವಜನಿಕರ ಕುತುಹಲಕ್ಕೆ ಕಾರಣಕಾಗಿದೆ.
ಕೆಪಿಸಿಸಿ ಸದಸ್ಯ ಹಾಗೂ ಉದ್ಯಮಿ ದೀಪಕ್ ದೊಡ್ಡರು, ಉದ್ಯಮಿಗಳಾದ ಶಿವರಾಮ ಹೆಗಡೆ, ಅನಿಲ್ ಕುಮಾರ್ ಮುಷ್ಟಗಿ, ರವೀಶ್ ಹೆಗಡೆ ಸೇರಿದಂತೆ ಒಟ್ಟು ಆರು ಮಂದಿಯ ಮನೆಗಳ ಹಾಗೂ ಅವರಿಗೆ ಸೇರಿದ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಮೂರು ಕಾರುಗಳಲ್ಲಿ ಬಂದಿರುವ ಅಧಿಕಾರಿಗಳ ತಂಡವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಾರವಾರ, ಮಂಗಳೂರು, ಹುಬ್ಬಳ್ಳಿಯಿಂದ ಅಧಿಕಾರಿಗಳ ತಂಡ ಆಗಮಿಸಿದೆ.