ಬೆಂಗಳೂರು, ಏ. ೩೦: ಬಳ್ಳಾರಿಯ ಅಕ್ರಮ ಗಣಿಕಾರಿಕೆ ನಕಲಿ ಪರ್ಮಿಟ್ ಆವಳಿ ಇವುಗಳನ್ನ ತಡೆಗಟ್ಟಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಅಗತ್ಯವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚೆಗೆ ಲೋಕಾಯುಕ್ತರು ಬಳ್ಳಾರಿ ಗಣಿ ಇಲಾಖೆ ಕಛೇರಿ ಮೇಲೆ ದಾಳಿ ನಡೆಸಿದಾಗ ನಕಲಿ ಪರ್ಮಿಟ್ಗಳು ಪತ್ತೆಯಾಗಿವೆ. ಈ ಹಿಂದೆ ಸಹ ನಕಲಿ ಪರ್ಮಿಟ್ ಪತ್ತೆಯಾಗಿತ್ತು. ಈ ಪರ್ಮಿಟ್ಗಳ ಮೇಲೆ ಕಮಲದ ಚಿತ್ರವಿದೆ. ಎಂದ ಅವರು ಆರೋಪಿಸಿ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಗೊತ್ತಿದೆ ಎಂದು ದೂರಿದರು.
ಈ ನಕಲಿ ಪರ್ಮಿಟ್ ಬಳಸಿ ಅದಿರು ಸುಮಾರು ೭ ಜಿಲ್ಲೆಗಳನ್ನ ಹಾದು ಬಂದರು ತಲುಪುತ್ತದೆ. ಹಾಗಾಗಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅರಣ್ಯಾಧಿಕಾರಿಗಳು ಗಣಿ ಇಲಾಖೆ ಅಧಿಕಾರಿಗಳು ಈ ನಕಲಿ ಪರ್ಮಿಟ್ ನಲ್ಲಿ ಭಾಗಿಯಾಗಿರುಬಹುದು ಎನ್ನವ ಸಂಶಯವನ್ನ ಅವರು ವ್ಯಕ್ತಪಡಿಸಿದರು.
ಈ ನಕಲಿ ಪರ್ಮಿಟ್ ಬಗ್ಗೆ ಏನು ಗೊತ್ತಿಲ್ಲ ಎನ್ನುವುದು ಸರಿಯಲ್ಲ. ಈ ವಿಚಾರ ಅವರಿಗೆ ಗೊತ್ತಿದೆ ಎಂದು ಹರಿಹಾಯ್ದರು. ಈಗಲಾದರೂ ಈ ಗಣಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನ ಒತ್ತಾಯಿಸಿದರು.
ಅಕ್ರಮ ಗಣಿಗಾರಿಕೆ ಆರೋಪಗಳ ಹಿನ್ನೆಲೆಯಲ್ಲಿ ಬಳ್ಳಾರಿಯ ರೆಡ್ಡಿ ಸಚಿವರು ರಾಜೀನಾಮೆ ನೀಡುವುದು ನೈತಿಕತನ. ಈಗಲಾದರೂ ರೆಡ್ಡಿಗಳು ಶಶಿತರರೂ ರೀತಿಯಲ್ಲಿಯೇ ರಾಜೀನಾಮೆ ನೀಡಿ ತನಿಖೆಗೆ ಅವಕಾಶನೀಡುವಂತೆ ಆಗ್ರಹಿಸಿದರು.
ಲಿಂಗಾಯಿತ ಸಾದರಿಗೆ ಪ್ರವರ್ಗ ೨ ಎ ಜಾತಿ ಪ್ರಮಾಣಪತ್ರ ನೀಡಿರುವುದನ್ನ ಹಿಂದಕ್ಕೆ ಪಡೆಯುತವಂತೆ ಅವರು ಒತ್ತಾಯಿಸಿದರು.