ಮಂಗಳೂರು, ಏಪ್ರಿಲ್ ೧೫: ಪಂಡಿತ್ ಹುದ್ದೆಗೆ ಅಭ್ಯರ್ಥಿಗಳು ಸಂಸ್ಕೃತದಲ್ಲಿ ಮಧ್ಯಮ ಅಥವಾ ಹಿಂದಿಯಲ್ಲಿ ಭೂಷಣ್ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ಗ್ರಂಥಿ ಹುದ್ದೆಗೆ ಪಂಜಾಬಿಯಲ್ಲಿ ವಿದ್ವಾನ್ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.ಮೌಲ್ವಿ ಹುದ್ದೆಗೆ ಅರೇಬಿಕ್ನಲ್ಲಿ ಮೌಲ್ವಿ ಅಲಿಂ, ಉರ್ದುವಿನಲ್ಲಿ ಅದೀಬ್ ಅಲಿಂ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ವಯೋಮಿತಿ ೨೭ರಿಂದ ೩೪ ವರ್ಷದೊಳಗಿರಬೇಕು. ೧೬೦ ಸೆಂ.ಮೀ.ಎತ್ತರವಿದ್ದು, ೫೦ ಕೆ.ಜಿ.ತೂಕ ಹೊಂದಿರಬೇಕು. ಎದೆ ಸುತ್ತಳತೆ ೭೭ ಸೆಂ.ಮೀ.ಇರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ೨೦೧೦ರ ಜುಲೈ ೨೭ರಂದು ಲಿಖಿತ ಪರೀಕ್ಷೆ ನಡೆಸುವರು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಂಕ ಪಟ್ಟಿಗಳು, ವಾಸಸ್ಥಳ, ಜಾತಿ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ೧೨ ವರ್ಣ ಭಾವಚಿತ್ರ ಲಗತ್ತಿಸಿ ಸೇನೆ ನೇಮಕಾತಿ ಕಛೇರಿ, ಕೂಲೂರು ಅಂಚೆ, ಮಂಗಳೂರು-೫೭೫೦೧೩ ಇವರಿಗೆ ದಿನಾಂಕ ೧-೫-೨೦೧೦ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮೇಲ್ಕಂಡ ಕಛೇರಿ ಸಂಪರ್ಕಿಸಿ ಪಡೆಯಬಹುದಾಗಿದೆ.