ಭಟ್ಕಳಫೆಬ್ರವರಿ 4 ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮುಹಮ್ಮದ್ ಹುಸೇನ್ (ಸಿವಿಲ್ ವಿಭಾಗ) ಹಾಗೂ ಗಣೇಶ್ ಪುಜಾರಿ (ಎಲೆಕ್ಟ್ರಿಕಲ್ ವಿಭಾಗ)ಇವರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್ ಸನ್ಮಾನಿಸಿ ಗೌರವಿಸಿದರು. ಈ ಇಬ್ಬರು ವಿದ್ಯಾರ್ಥಿಗಳಲ್ಲದೆ ವಿ.ವಿ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಜುಮನ್ ತಾಂತ್ರಕ ಮಹಾವಿದ್ಯಾಲಯದ ಈ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಗಳಿಸಿ ಅಂಜುಮನ್ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೂ ಅಬ್ದುಲ್ ರಹೀಮ್ ಅಂಜುಮನ್ ತಾಂತ್ರಿಕ ಮಹಾವಿದ್ಯಾಯಲವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ನುರಿತ ಉಪನ್ಯಾಸಕರಿಂದ ಕೂಡಿದೆ. ಇಲ್ಲಿಯ ಪರಿಸರ ವಿದ್ಯಾರ್ಥಿಗಳನ್ನು ಕಲಿಯಲು ಇನ್ನಷ್ಟು ಪ್ರೋತ್ಸಾಹವನ್ನು ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಮುಹಮ್ಮದ್ ಅಲಿ ಜುಷದ್ದಿ, ಅಮಾತ್ ಶಾಬಂದ್ರಿ, ಫೈರೋಝ್ ರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರೋ.ಎಂ.ಎ.ಭಾವಿಕಟ್ಟಿ ಮತ್ತು ಪ್ರೋ.ಅನಿಲ್ ಕಡ್ಲೆ ತಮ್ಮ ಅನಿಕೆಗಳನ್ನು ವ್ಯಕ್ತಪಡಿಸಿದರು.
ಕಾಲೇಜೀನ ಪ್ರಾಚಾರ್ಯ ಡಾ.ನೂರ್ ಮುಹಮ್ಮದ್, ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಕಾಸಿಮಜಿ, ಉಪಸ್ಥಿತರಿದ್ದರು. ಪ್ರೋ.ಶ್ರವಣ ನಾಯಕ್ ಸ್ವಾಗತಿಸಿದರು. ಪ್ರೋ.ಎನ್.ಎಮ್. ಹಿರೆಮಠ ಧನ್ಯವಾದವಿತ್ತರು.