ಬೆಂಗಳೂರು, ಏ. ೩೦: ಸಾದರ ಲಿಂಗಾಯಿತರನ್ನ ಪ್ರವರ್ಗ ೨ ಎ ಸೇರಿಸಿ ಜಾತಿ ಪ್ರಮಾಣ ಪತ್ರ ನೀಡಿರುವ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನ ಅಮಾನತು ಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸಾದರ ಲಿಂಗಾಯಿತರನ್ನ ಪ್ರಗರ್ವ ೨ ಎ ಸೇರಿಸಿ ತುಮಕೂರು, ಮೈಸೂರು, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಪ್ರಮಾಣ ಪತ್ರನೀಡಿದ್ದು, ಸರ್ಕಾರದ ಸ್ವಷ್ಟ ಆದೇಶ ಇರದಿದ್ದರೂ ಈ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡಿದ್ದರೆ ಇದು ಅಪರಾಧ ಹಾಗಾಗಿ ಜಿಲ್ಲಾಧಿಕಾರಿಗಳನ್ನ ಅಮಾನತು ಗೊಳಿಸುವಂತೆ ಒತ್ತಾಯಿಸಿದರು.
ಸರ್ಕಾರ ಆದೇಶ ಇದ್ದು, ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ಅವರು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಸರ್ಕಾರ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರಿಗೆ ಯಾವುದೇ ಸೌಲಭ್ಯ ಇಲ್ಲ ಎನ್ನವ ರಾಷ್ಟ್ರೀಯ ಪರಿಶಿಷ್ಟ ಜಾತಿ ವರ್ಗದ ಆಯೋಗದ ಅಧ್ಯಕ್ಷ ಬೂಟಾ ಸಿಂಗ್ ಹೇಳಿಕೆಗೆ ಮುಖ್ಯಮಂತ್ರಿಗಳು ಕೆಲ ಸ್ವಷ್ಟನೆ ನೀಡಿ ಬೂಟಾ ಸಿಂಗ್ ಅವರಿಗೆ ಮಾಹಿತಿ ಇಲ್ಲ ಎಂದಿರುವ ಖಂಡನೀಯ. ಸಭೆಯಲ್ಲಿದ್ದ ಸಚಿವರು ಅಧಿಕಾರಿಗಳು ಮಾಹಿತಿ ನೀಡಿರಿಲಿಲ್ಲವೇ ಎಂದು ಪ್ರಶ್ನಿಸಿದರು.
ವಜಾಮಾಡಿ
ಗಡಿ ವತ್ತುವರಿ ಸರ್ವೇಕ್ಷಣಾ ವರದಿಯಂತೆ ಗಡಿ ಭಾಗಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಹಾಗಾಗಿ ಬಳ್ಳಾರಿಯ ಸಚಿವರನ್ನ ವಜಾಮಾಡುವಂತೆ ಅವರು ಒತ್ತಾಯಿಸಿದರು.