ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ನರಕಯಾತನೆ

ಭಟ್ಕಳ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ನರಕಯಾತನೆ

Sun, 01 Nov 2009 02:22:00  Office Staff   S.O. News Service
ಭಟ್ಕಳ, ಅಕ್ಟೋಬರ್ 31 : ನಂಜುಂಡಪ್ಪ ಆಯೋಗದ ವರದಿಯಲ್ಲಿ ಭಟ್ಕಳದ ಹೆಸರು ಬಂದಿದ್ದಾಗಿದೆ. ಊರು-ಕೇರಿಯ ಅಭಿವೃದ್ಧಿಗೆ ಅಂತಲೇ ಸರಕಾರ ಸಾಕಷ್ಟು ಪ್ರಮಾಣದಲ್ಲಿ  ಹಣವನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಅದರಲ್ಲಿಯೂ ಶೈಕ್ಷಣಿಕ ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ತೆರೆದ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳ ವಸತಿ ನಿಲಯಗಳಿಗಂತಲೂ ಇಲ್ಲಿ ಲೆಕ್ಕವೇ ಇಲ್ಲ. ಆದರೆ ಅದರ ಪ್ರಯೋಜನವನ್ನು ಇಲ್ಲಿಯ ನಾಗರಿಕರಿಗೆ ಒದಗಿಸಲು ಅಧಿಕಾರಿಗಳು ತೋರಿಸುತ್ತಿರುವ ಅಸಡ್ಡೆ ಮಾತ್ರ ಹೇಳ ತೀರದಾಗಿದೆ.
 
ಸಮಾಜ ಕಲ್ಯಾಣ ಇಲಾಖೆ ಎಂಬ ನತದೃಷ್ಟ ಇಲಾಖೆಯಿಂದ ಕಲ್ಯಾಣದ ಮಾತು ಹೋಗಲಿ, ಜನರು ಇಷ್ಟು ದಿನ ಆ ಇಲಾಖೆಯನ್ನು ಸಹಿಸಿಕೊಂಡದ್ದೇ ಹೆಚ್ಚು ಎಂಬ ಮಾತು ಸುಳಿದಾಡುತ್ತಿದೆ. ಇಲಾಖೆಯಡಿಯಲ್ಲಿ ಬರುವ ಮೂರು ವಿದ್ಯಾರ್ಥಿ ನಿಲಯಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿವೆ. ಬೆಳಕೆ ಹೊಸ ಕಟ್ಟಡ ಬಾಗಿಲು ತೆರೆಯಲು ಇನ್ನೂ ಮೀನ ಮೇಷ ಎಣಿಸುತ್ತಲೇ ಇದೆ. ಭಟ್ಕಳ ಶಹರ ಭಾಗದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವಂತೂ ಈಗ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಇದೀಗ ತಾಲೂಕಿಗೆ ಹೊಸದಾಗಿ ಮಂಜೂರಾಗಿರುವ ಕಿತ್ತೂರು ಚೆನ್ನಮ್ಮ ಶಾಲೆಯ 33 ವಿದ್ಯಾರ್ಥಿಗಳಿಗೆ ಇದೇ ಹಾಸ್ಟೆಲ್ ಆಶ್ರಯ ಒದಗಿಸಿದೆ. ಸುಮಾರು ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್‌ನಲ್ಲಿದ್ದ ಮೂರ್‍ನಾಲ್ಕು ಶೌಚಾಲಯಗಳು ಬಾಗಿಲು ತೆರೆಯುವ ಸ್ಥಿತಿಯಲ್ಲಿಯೇ ಇಲ್ಲ. ತುಂಬಿಕೊಂಡ ಮಲೀನ ನೀರು ಮಕ್ಕಳು ಬರುವ ದಾರಿಯಲ್ಲಿಯೇ ಹರಿದು ಹೋಗುತ್ತಿದೆ. ಮಕ್ಕಳ ಆರೋಗ್ಯದ ಕುರಿತು ಯಾವೊಬ್ಬ ಅಧಿಕಾರಿಗೂ ಕಾಳಜಿಯೇ ಇದ್ದಂತಿಲ್ಲ. ರೋಗ ರುಜಿನಗಳ ಭಯ ವಿದ್ಯಾರ್ಥಿಗಳ ಪಾಲಕರನ್ನು ಆವರಿಸಿಕೊಂಡಿದೆ. ತೆಂಗಿನಗುಂಡಿ ವಸತಿ ನಿಲಯವೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಶೌಚಾಲಯದ ನರಕಯಾತನೆಯಿಂದ ವಿದ್ಯಾರ್ಥಿಗಳು ತಪ್ಪಿಸಿಕೊಂಡು ಬಹಿರ್ದೆಸೆಗಾಗಿ ಪಕ್ಕದ ಬಯಲಿನತ್ತ ಮುಖ ಮಾಡಿದ್ದಾರೆ. ಸೊಳ್ಳೆಗಳ ವಿಪರೀತ ಕಾಟಗಳ ನಡುವೆಯೂ ಮೇಲೆ ನೇತು ಹಾಕಿದ ಫ್ಯಾನುಗಳು ಜೀವ ಕಳೆದು ಕೊಂಡಿವೆ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಕಿವಿಗೊಡಲು ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಗೆ ಪುರುಸೊತ್ತಿಲ್ಲ. ಅವರು ಹೇಳುವುದೇ ಬೇರೆ. ‘ನಮ್ಮಲ್ಲಿ ರಿಪೇರಿಗಾಗಿ ಹಣ ಇಲ್ಲ. ತಾಲೂಕು ಪಂಚಾಯತ, ಪುರಸಭೆ ಇದಕ್ಕೆ ಅನುದಾನವನ್ನು ಒದಗಿಸಬೇಕಾಗಿದೆ. ನಾವೂ ಅರ್ಜಿ ಕೊಟ್ಟು ಸುಸ್ತಾಗಿ ಹೋಗಿದ್ದೇವೆ.....’ ಒಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ, ಇನ್ನೊಂದೆಡೆ ಜನಪ್ರತಿನಿಧಿಗಳ ದಿವ್ಯ ಮೌನ ತಾಲೂಕಿನ ವಸತಿ ನಿಲಯಗಳಿಗೆ ಒಟ್ಟಾರೆಯಾಗಿ ಶನಿ ವಕ್ಕರಿಸಿಕೊಂಡಂತಾಗಿದೆ. ವಿದ್ಯಾರ್ಥಿಗಳ ಪಾಡಂತೂ ಇದೀಗ ಹೇಳ ತೀರದಾಗಿದೆ.
 
ತಾಪಂ ಅಧ್ಯಕ್ಷರ ಭೇಟಿ: ವಸತಿ ನಿಯಲಗಳ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳ ಪಾಲಕರನೇಕರು ದೂರಿಕೊಂಡ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ ಅಧ್ಯಕ್ಷೆ ಗೌರಿ ಮೊಗೇರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳಿಂದಲೇ ಸಮಸ್ಯೆಯನ್ನು ಆಲಿಸಿದ ಅವರು, ಈ ಕುರಿತು ಮುಂದಿನ ಸಭೆಯಲ್ಲಿ ರ್ಚಿಸುವುದಾಗಿ ತಿಳಿಸಿ

Share: