ಮೈಸೂರು, ಮಾ. ೧೮ (ಕರ್ನಾಟಕ ವಾರ್ತೆ) - ಕೇಂದ್ರ ಹಣಕಾಸು ಸಚಿವ ಶ್ರೀ ಪ್ರಣಬ್ ಮುಖರ್ಜಿ ಅವರು ಇದೇ ದಿನಾಂಕ ೨೨.೦೩.೨೦೧೦ರಂದು ಮೈಸೂರಿಗೆ ಒಂದು ದಿನದ ಭೇಟಿಗಾಗಿ ಆಗಮಿಸುವರು.
ಅಂದು ಮಧ್ಯಾಹ್ನ ೧೨.೪೦ಕ್ಕೆ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಲಿ. ಆವರಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವರು. ಮಧ್ಯಾಹ್ನ ೧೨.೫೦ಕ್ಕೆ ಬ್ಯಾಂಕ್ ನೋಟ್ ಪೇಪರ್ ಮಿಲ್‌ನ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸುವರು. ಅಂದೇ ಮಧ್ಯಾಹ್ನ ೨.೩೦ಕ್ಕೆ ಮೈಸೂರಿನಿಂದ ನಿರ್ಗಮಿಸುವರು.