ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಬಳ್ಳಾಪುರ: ಚಟುವಟಿಕೆಯಾಧಾರಿತ ಶಿಕ್ಷಣ - ಮಕ್ಕಳಿಗೆ ವರದಾನ : ಎಸ್. ರಘುನಾಥರೆಡ್ಡಿ

ಚಿಕ್ಕಬಳ್ಳಾಪುರ: ಚಟುವಟಿಕೆಯಾಧಾರಿತ ಶಿಕ್ಷಣ - ಮಕ್ಕಳಿಗೆ ವರದಾನ : ಎಸ್. ರಘುನಾಥರೆಡ್ಡಿ

Sun, 20 Dec 2009 03:02:00  Office Staff   S.O. News Service
ಗುಡಿಬಂಡೆ, ಡಿಸೆಂಬರ್ 19: ಚಟುವಟಿಕೆಯಾಧಾರಿತ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಾಗುತ್ತಿರುವುದರಿಂದ ಸರ್ವ ಶಿಕ್ಷಣ ಅಭಿಯಾನದ ಯೋಜನೆ ಮಕ್ಕಳಿಗೆ ವರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ  ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಕಲಿಕೋಪಕರಣಗಳ ಮೇಳವನ್ನು ಉದ್ಘಾಟಿಸಿ ತಿಳಿಸಿದರು.
 
ಉತ್ತಮ ಕಲಿಕೋಪಕರಣಗಳನ್ನು ಪ್ರದರ್ಶಿಸಿದ ಜಂಗಾಲಹಳ್ಳಿ, ಪಟ್ಟಣದ ಅಂಬೇಡ್ಕರ್ ನಗರ, ಕಡೇಹಳ್ಳಿ, ನುಲಿಗುಂಬ ಇಡ್ರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಬಹುಮಾನಗಳನ್ನು ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಮಾಡಲಾಯಿತು.


Share: