ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವ್ಯಕ್ತಿಯೊರ್ವ ಬಾವಿಗೆ ಹಾರಿ ಆತ್ಮಹತ್ಯೆ

ವ್ಯಕ್ತಿಯೊರ್ವ ಬಾವಿಗೆ ಹಾರಿ ಆತ್ಮಹತ್ಯೆ

Tue, 31 Oct 2023 06:05:35  Office Staff   SO News

ಭಟ್ಕಳ: ಶ್ಯಾಮಿಯಾನ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೊರ್ವ ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಶನಲ್ ಕಾಲನಿಯ ಮನೆಯೊಂದರ ಬಾವಿಯಲ್ಲಿ ಹಾರಿ  ಆತ್ಮಹತ್ಯೆ ನಾಡಿಕೊಂಡಿದ್ದಾನೆ ಹೊನ್ನಾವರ ತಾಲೂಕಿನ ಮಂಕಿಯ ಹರವಾಸೆ ನಿವಾಸಿ ಈಶ್ವರ ದುರ್ಗಯ್ಯ ನಾಯ್ಕ(೩೫) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನು ಶನಿವಾರ ಮುರ್ಡೇಶ್ವರ ಶ್ಯಾಮಿಯಾನ ಕೆಲಸಕ್ಕೆಂದು ತೆರಳಿ ಮನಗೆ ಮರಳಿಲ್ಲ. ಭಾನುವಾರ ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನ್ಯಾಶನಲ್ ಕಾಲನಿಯ ಮನೆಯೊಂದರ ಮುಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈ ಕುರಿತು ದೇವಿದಾಸ ದುರ್ಗಯ್ಯ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ


Share: