ಭಟ್ಕಳ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ನೀಡುವ ನೀಡುವ ಯಾವುದೆ ಸೌಲಭ್ಯಗಳು ಮಂಜೂರಿಯಾಗಿಲ್ಲ ಇದರಿಂದ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆ ಮುಖ್ಯಮಂತ್ರಿಗಳಿಗೆ ಮನವಿ ನೀಡಿದೆ.
೨೦೨೧-೨೨ ಮತ್ತು೨೨ -೨೩ ನೇ ಸಾಲಿನಲ್ಲಿ ಸಲ್ಲಿಸಿರುವ ಶೈಕ್ಷಣಿಕ ಅರ್ಜಿಗಳಿಗೆ ಇದುವರೆಗೂ ಧನಸಾಯ ಮಂಜೂರಿ ಆಗಲಿಲ್ಲ. ೨೦೨೩-೨೪ ನೇ ಸಾಲಿನ ಶೈಕ್ಷಣಿಕ ಅರ್ಜಿ ಸ್ವೀಕೃತಿ ಇನ್ನೂ ಪ್ರಾರಂಭವಾಗಲಿಲ್ಲ, ಕಟ್ಟಡ ಕಾರ್ಮಿಕ ಮಕ್ಕಳು ಶೈಕ್ಷಣಿಕ ಧನ ಸಹಾಯ ಪಡೆಯಲಾಗದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ, ಕಾರ್ಮಿಕರ ಮಕ್ಕಳು ಕೂಲಿ ಕೆಲಸಕ್ಕೆ ಹೊರಟಿದ್ದಾರೆ, ಹಿಂದೆ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ ೧೯೯೬ ವಿರುದ್ಧವಾಗಿ ಯಾವುದೇ ದೂರ ದೃಷ್ಟಿ ಇಲ್ಲದೆ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳೊAದಿಗೆ ಚರ್ಚೆ ಮಾಡದೆ ಅವಿಜ್ಞಾನಕವಾದ ಯೋಜನೆಗಳನ್ನು ತಂದು ಹಲವಾರು ರೀತಿಯ ಗುಣಮಟ್ಟ ಇಲ್ಲದ ಕಿಟ್ಟು ಕಾರ್ಮಿಕರಿಗೆ ನೀಡಿ ಸಾವಿರಾರು ಕೋಟಿ ರೂಪಾಯಿ ಮೂಲ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗ ಮಾಡಿದೆ. ಪ್ಲಂಬರ್ ಕಿಟ್, ಕಾರ್ಪೆಂಟರ್ ಕಿಟ್, ಪೈಂಟರ್ ಕಿಟ್,ಬಾರ್ ಬೆಂಡಿAಗ್ ಕಿಟ್, ಮೆಷನ್ ಕಿಟ್, ಸ್ಕೂಲ್ ಕಿಟ್, ಟ್ಯಾಬ್, ಲ್ಯಾಪ್ಟಾಪ್ ,ಕಾರ್ಮಿಕರಿಗೆ ಬಸ್ ಪಾಸ್, ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾ ಸೇವೆ, ಕಾರ್ಮಿಕರ ಕೌಶಲ್ಯ ಅಭಿವೃದ್ಧಿ ತರಬೇತಿ, ಮುಂತಾದ ಬೇಡವಾದ ಯೋಜನೆಗಳನ್ನು ತಂದು ಕಲ್ಯಾಣ ಮಂಡಳಿ ನಿಧಿಯ ಸಮತೋಲವನ್ನು ಕಾಪಾಡದೇ ರಾಜ್ಯದ ಕಾರ್ಮಿಕರಿಗೆ ವಂಚನೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ಭಟ್ಕಳದಲ್ಲಿ ಕಳೆದ ಆರು ಏಳು ವರ್ಷದಿಂದ ಸಲ್ಲಿಕೆ ಆಗಿರುವ ಮ್ಯಾನುವಲ್ ಅರ್ಜಿಗಳು ಮದುವೆ, ಪಿಂಚಣಿ,ವೈದ್ಯಕೀಯ, ಮರಣ, ಹೆರಿಗೆ, ಮುಂತಾದ ಅರ್ಜಿಗಳಿಗೆ ಕೂಡಲೇ ಫಲಾನುಭವಿ ಖಾತೆಗೆ ಧನಸಹಾಯ ಜಮಾ ಆಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆ ತಹಸೀಲ್ದಾರ ಮೂಲಕ ಮನವಿ ನೀಡಿದೆ. ರಾಜ್ಯ ಕಾರ್ಯದರ್ಶಿ ಜಿ.ಎನ್. ರೇವಣಕರ್ ತಾಲೂಕಿನ ಕಟ್ಟಡ ಕಾರ್ವಿಕರು ಇದ್ದರು.