ಭಟ್ಕಳ, ಜನವರಿ 6: ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದ ಅರಸಿಕೇರೆ ಬೀರೂರಿನ ನಿವಾಸಿ ಆಸಿಫುಲ್ಲಾ (23) ಎಂಬಾತನು ಇಲ್ಲಿನ ಸಮುದ್ರ ಕಿನಾರೆಯಲ್ಲಿ ಈಜಲು ಹೋಗಿ ಸಮುದ್ರದ ಭಾರಿ ಅಲೆಗಳೊಂದಿಗೆ ಸೆಣಸಾಡದೆ ಸಾವನ್ನಪ್ಪಿದ ಘಟನೆ ಮುರುಡೇಶ್ವರದಲ್ಲಿ ಜರುಗಿದೆ.
ಮಾರುತಿ ಓಮಿನಿಯೊಂದರಲ್ಲಿ 8 ಜನ ಪ್ರವಾಸಿಗರನ್ನು ಮುರುಡೇಶ್ವರಕ್ಕೆ ಕರೆ ತಂದ ಚಾಲಕರು ಮಂಗಳವಾರದಂದು ಮದ್ಯಾಹ್ನ ಸಮುದ್ರದಲ್ಲಿ ಈಜಲು ತೆರಳಿದ ಎನ್ನಲಾಗಿದ್ದು ಭಾರಿ ಅಲೆಗಳು ಆತನನ್ನು ಸೆಳೆದುಕೊಂಡು ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಂದು ಸಂಜೆ ಮೃತದೇಹ ಪತ್ತೆಯಾಗಿದ್ದು ಪ್ರಕರಣವು ಮುರುಡೇಶ್ವರ ಠಾಣೆಯಲ್ಲಿ ದಾಖಲಾಗಿದೆ