ಹಾಸನ, ಡಿಸೆಂಬರ್ 11: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಅದರ್ಶವಾದ ಸೇವೆ ಸಲ್ಲಿಸುತ್ತಿರುವ ಅರ್ಹ ಮಹಿಳೆ ಹಾಗೂ ಸಂಸ್ಥೆಗೆ ಸ್ತ್ರೀಶಕ್ತಿ ಪುರಸ್ಕಾರವನ್ನು ಮಾರ್ಚ್ 10ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ನೀಡಲಾಗುತ್ತದೆ.
ಸ್ತ್ರೀ ಶಕ್ತಿ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮಹಿಳೆಯು 30 ವರ್ಷ ತುಂಬಿದವರಾಗಿರಬೇಕು. ಮಹಿಳೆಯರ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಕನಿಷ್ಟ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಾಮಾಜಿಕ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದ ಮಹಿಳೆಯರು ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡುವಲ್ಲಿ ಶ್ರಮಿಸಿರಬೇಕು.
ನಿರ್ದಿಷ್ಟ ಅರ್ಜಿ ನಮೂನೆ ಹಾಗೂ ಮಾರ್ಗ ಸೂಚಿಯನ್ನು http//www.wod.nic.ing ರಂತೆ ಭರ್ತಿ ಮಾಡಿದ ಅರ್ಜಿಗಳನ್ನು ಉಪ-ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆ.ಆರ್.ಪುರಮ, ಸಂಪಿಗೆ ರಸ್ತೆ ಹಾಸನ ಇವರಿಗೆ ಈ ತಿಂಗಳ ೧೬ ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸುವುದು.
ನಿಗದಿತ ದಿನಾಂಕದ ನಂತರ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆ.ಆರ್.ಪುರಂ ೧೧ನೇ ಕ್ರಾಸ್ ಹಾಸನ ಇವರಿಂದ ಪಡೆಯಬಹುದು.