ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಪಡುಬಿದ್ರಿ: ಕನಸಿನ ಸೌಧ ಉದ್ಘಾಟನೆ - ಒಂದು ಕೋಟಿ ರೂ. ವೆಚ್ಚ

ಪಡುಬಿದ್ರಿ: ಕನಸಿನ ಸೌಧ ಉದ್ಘಾಟನೆ - ಒಂದು ಕೋಟಿ ರೂ. ವೆಚ್ಚ

Sun, 27 Dec 2009 03:02:00  Office Staff   S.O. News Service
ಪಡುಬಿದ್ರಿ,ಡಿಸೆಂಬರ್ 26:ತುಳುನಾಡಿಗೆ ವಿಶೇಷ ಸ್ಥಾನ ಮಾನದ ಕೊಡುಗೆಯನ್ನು ನೀಡಿದ್ದ ಬಿಲ್ಲವರು ಜಾತಿ, ಮತ, ಧರ್ಮದ ಬೇಧ-ಭಾವವಿಲ್ಲದೆ ಸಮಾನತೆಯಿಂದ ಸಮಾಜ ಮುಖಿಯಾಗಿ ಸಾಗುತ್ತಿದ್ದಾರೆ. ತುಳುನಾಡಿನ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯವನ್ನು ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಅಸ್ತಿತ್ವವನ್ನು ಮತ್ತಷ್ಟು ಪ್ರಬಲಗೊಳಿಸಿಕೊಂಡು ಅದ್ಭುತ ಶಕ್ತಿಯಾಗಿ ಬಿಲ್ಲವರು ಸಾಗಬೇಕು ಎಂದ ಅವರು, ಸಾರ್ವಜನಿಕ ಬದುಕಿನೊಂದಿಗೆ ಸಾಮಾಜಿಕ ಶಕ್ತಿಯಾಗಿ ಬಿಲ್ಲವರು ಬೆಳೆಯಬೇಕೆಂದು ಸಂಸದ ಡಿ.ವಿ.ಸದಾನಂದ ಗೌಡ ಕರೆ ನೀಡಿದರು.
ಹೆಜಮಾಡಿ ಬಿಲ್ಲವರ ಸಂಘ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕನಸಿನ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  
 
ನಾರಾಯಣ ಗುರುಗಳ ತತ್ವದಂತೆ ಒಗ್ಗಟ್ಟಾಗಿದ್ದ ಬಿಲ್ಲವರು ಇಂದು ರಾಜಕೀಯ ಮೇಲಾಟಕ್ಕೆ ತುತ್ತಾಗಿ ಚದುರಿ ಹೋಗಿದ್ದಾರೆ. ಗುರುಗಳ ಆದರ್ಶವನ್ನು ಪಾಲಿಸಿಕೊಂಡು ಬಿಲ್ಲವರು ಮತ್ತೆ ಸಮಾಜಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡು ಕಚ್ಚಾಟ ನಡೆಸದೆ ಬೆಳೆಯಬೇಕೆಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಹೇಳಿದರು.
 
ಶಿವಗಿರಿ ಮಠದ ಸತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮತ್ತು ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಸುವರ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರಿನ ಉದ್ಯಮಿ ಜೆ.ವಿ. ಸೀತಾರಾಮ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್, ಮೂಲ್ಕಿ ಸೋಮಪ್ಪ ಸುವರ್ಣ, ಪ್ರಮೋದ್ ಮಧ್ವರಾಜ್, ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕಿ ಪುಷ್ಪಲತಾ ಎನ್ ಸಾಲ್ಯಾನ್, ನಿರ್ದೇಶಕ ಎಲ್.ವಿ. ಅಮೀನ್, ಕಾರ್ಯಾಧ್ಯಕ್ಷೆ  ರೋಹಿಣಿ ಜೆ ಸಾಲ್ಯಾನ್, ಕಾಪು ಸುಂದರ ಕೆ. ಶೆಟ್ಟಿ, ಸರಸು ಡಿ ಬಂಗೇರ, ಮುಂಬಯಿ ಬಿಲ್ಲವರ ಅಸೋಸಿಯೇಶನ್‌ನ ಗೌರವಾಧ್ಯಕ್ಷ ವೈ. ನಾಗೇಶ್, ನಾರಾಯಣ ಪೂಜಾರಿ, ಸುಭಾಸ್ ಸಾಲ್ಯಾನ್, ಮಿಥುನ್ ಆರ್ ಹೆಗ್ಡೆ, ಗಣೇಶ್ ಬಂಗೇರ, ಉದ್ಯಮಿ ಕೊಗ್ಗಣ್ಣ ಶೆಣೈ, ಟಿ ಕೆ ಖಾದರ್, ಬಾಬು ಮುಖಾರಿ, ಪುರೋಹಿತ ಎಚ್ ರಂಗಣ್ಣ ಭಟ್, ಮುಂಬಯಿಯ ಉದ್ಯಮಿಗಳಾದ ಶೇಖರ್ ಎಸ್ ಪೂಜಾರಿ, ರವೀಂದ್ರ ಎಸ್ ಶೆಟ್ಟಿ, ಯೋಗೇಶ್ ಎಸ್ ಪೂಜಾರಿ, ರಾಘು ಎಂ ಪೂಜಾರಿ, ಹರೀಶ್ ಜಿ ಅಮೀನ್, ಪರಮಾನಂದ ಸಾಲ್ಯಾನ್, ಹರೀಶ್ ಹೆಜ್ಮಾಡಿ, ನಿತ್ಯಾನಂದ ಕೋಟ್ಯಾನ್ ಸುರೇಂದ್ರ ಪೂಜಾರಿ, ಜಿನರಾಜ್ ಬಂಗೇರ, ತೇಜ್‌ಪಾಲ್ ಬಿ ಸುವರ್ಣ ಉಪಸ್ಥಿತರಿದ್ದರು. 

ಚಿತ್ರ, ವರದಿ: ಹಮೀದ್ ಪಡುಬಿದ್ರಿ.

Share: