ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಲಂಚ ಪಡೆದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಶಿಕ್ಷೆ

ಲಂಚ ಪಡೆದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ಶಿಕ್ಷೆ

Tue, 11 Jun 2024 02:11:41  Office Staff   SOnews

 

ಕಾರವಾರ: ಕರಾವಳಿ ಪೊಲೀಸ್ ಠಾಣೆ ಕಾರವಾರದಲ್ಲಿ ದಾಖಲಾದ ಪ್ರಕರಣದಿಂದ ಹೆಸರನ್ನು ಕೈ ಬಿಡುವ ಸಂಬA ಲಂಚ ಪಡೆದಿದ್ದ ಕರಾವಳಿ ಕಾವಲು ಪಡೆಯ ಸಿಪಿಸಿ ಉದಯ ಸೀತಾರಾಮ ಪಡ್ತಿ ಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ಕಲಂ 7, ರಡಿ 1 ವರ್ಷಗಳ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ. 5000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ. ಕಲಂ13(2) ರಡಿಯಲ್ಲಿ 2 ವರ್ಷಗಳ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ 10000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ:ಪಿರ್ಯಾದಿ ವೀರೇಂದ್ರ ವಿನಾಯಕ ನಾಯ್ಕ ಸಾ. ಪೊಲಿಯಂ, ಕಾಣಕೋಣ, ಗೋವಾ ಇವರ ವಿರುದ್ದ ಕರಾವಳಿ ಪೊಲೀಸ್ ಠಾಣೆ ಕಾರವಾರದಲ್ಲಿ ಪ್ರಕರಣ ದಾಖಲಾಗಿದ್ದು, ಅವರ ಮನೆಯ ಮುಂದೆ ನಿಲ್ಲಿಸಿದ್ದ ಅವರ ತಮ್ಮ ವಿಶಾಲ ನಾಯ್ಕ ರವರ ಮಾಲೀಕತ್ವದ ಜೀಪ್ ವಾಹನವನ್ನು ಕರಾವಳಿ ಪೊಲೀಸ್ ಠಾಣೆಯ ಪೊಲೀಸರು ಜಪ್ತು ಮಾಡಿ, ವಾಹನದ ಮಾಲೀಕರಾದ ವಿಶಾಲ ನಾಯ್ಕ ರನ್ನು ವಿಚಾರಣೆಣೆಗೆ ಹಾಜರಾಗಲು ನೋಟಿಸ್ ನೀಡಿರುತ್ತಾರೆ. ಪ್ರಕರಣದ ವಿಚಾರಣೆಗೆ ಸಂಬAಧಿಸಿದAತೆ ಪಿರ್ಯಾದಿಯು ಆಪಾದಿತ ಉದಯ ಸೀತಾರಾಮ ಪಡ್ತಿ ಸಿಪಿಸಿ ಕರಾವಳಿ ಕಾವಲು ಪಡೆ ಇವರನ್ನು ಭೇಟಿ ಮಾಡಿ ವಿಚಾರಿಸಲಾಗಿ, ರೂ. 25000 ಲಂಚ ನೀಡಿದರೆ ಪೊಲೀಸ್ ನಿರೀಕ್ಷಕರಿಗೆ ಹೇಳಿ ಪಿರ್ಯಾದಿಯ ತಮ್ಮ ವಿಶಾಲ ನಾಯ್ಕ ರವರನ್ನು ಪ್ರಕರಣದಿಂದ ಕೈ ಬಿಡುವುದಾಗಿ ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಪಿರ್ಯಾದಿಯಿಂದ ರೂ. 25000 ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ಯಾಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತನ ವಿರುದ್ದ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.

 ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷಿö್ಮಕಾಂತ ಎಮ್ ಪ್ರಭು ವಾದ ಮಂಡಿಸಿರುತ್ತಾರೆ.

 


Share: