ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರೈಲಿನಡಿ ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ವ್ಯಕ್ತಿ

ರೈಲಿನಡಿ ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ವ್ಯಕ್ತಿ

Thu, 28 Mar 2024 01:30:05  Office Staff   SOnews

ಭಟ್ಕಳ:  ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುರುಡೇಶ್ವರ ಪೊಲೀಸ್ ಠಾಣಾ ವ್ಯಪ್ತಿಯ  ತೆರ್ನಮಕ್ಕಿಯಲ್ಲಿ ವರದಿಯಾಗಿದೆ.

ಸುಮಾರು 30 ರಿಂದ 32 ವರ್ಷದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲವಾಗಿದೆ. ರೈಲಿಗೆ ತಲೆ ಕೊಟ್ಡ ಪರಿಣಾಮ ತಲೆಯ ಮೇಲೆ ರೈಲು ಹಾದು ಹೋಗಿದೆ. ಇದರಿಂದ ಈತನ ತಲೆ ಒಡೆದು ಛಿದ್ರವಾಗಿ ಮೆದುಳು ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೇ ಬಲ ಕೈ ಕಟ್ಟಾಗಿದೆ.

ಮೃತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ನಾಗಪ್ಪ ಸುಬ್ರಾಯ ನಾಯ್ಕ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.


Share: