ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಿಂದ ವೃತ್ತಿ ಪರ ಕೋರ್ಸ್‌ಗಳ ಪ್ರವೇಶವನ್ನು ಖಾಸಗಿ ಮತ್ತು ಸರ್ಕಾರ ಶೇಕಡ 50:50 ಅನುಪಾತದಲ್ಲಿ ಹಂಚಿಕೆಮಾಡಿಕೊಳ್ಳಲು ನಿರ್ಧಾರ

ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಿಂದ ವೃತ್ತಿ ಪರ ಕೋರ್ಸ್‌ಗಳ ಪ್ರವೇಶವನ್ನು ಖಾಸಗಿ ಮತ್ತು ಸರ್ಕಾರ ಶೇಕಡ 50:50 ಅನುಪಾತದಲ್ಲಿ ಹಂಚಿಕೆಮಾಡಿಕೊಳ್ಳಲು ನಿರ್ಧಾರ

Fri, 19 Feb 2010 17:56:00  Office Staff   S.O. News Service

ಬೆಂಗಳೂರು, ಫೆಬ್ರವರಿ ೧೯: ಬರುವ ಶೈಕ್ಷಣಿಕ ವರ್ಷದಿಂದ ವೃತ್ತಿ ಪರ ಕೋರ್ಸ್‌ಗಳ ಪ್ರವೇಶವನ್ನು ಖಾಸಗಿ ಮತ್ತು ಸರ್ಕಾರ ಶೇಕಡ ೫೦-೫೦ ಅನುಪಾತದಲ್ಲಿ ಹಂಚಿಕೆಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

 

 

ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಶೇಕಡ ೪೫-೫೫ ಅನುಪಾತದಲ್ಲಿ ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. ಶುಲ್ಕವನ್ನು ೧೫ ಸಾವಿರ ರೂಪಾಯಿಗೆ ಹೆಚ್ಚಿಸಿದ್ದು ಇದರಲ್ಲಿ ೧೦ ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರ ಖಾಸಗಿ ಆಡಳಿತ ಮಂಡಳಿಗೆ ಪಾವತಿ ಮಾಡಲಿದೆ.

 

 

ಸಾಮಾನ್ಯ ಅಭ್ಯರ್ಥಿಯ ಶುಲ್ಕವನ್ನು ೫ ಸಾವಿರ ಹೆಚ್ಚಿಸಿದ್ದು ೨೫ ಸಾವಿರ ರೂ ದಿಂದ ೩೦ ಸಾವಿರ ರೂ ಗೆ ಏರಿಸಲು ನಿರ್ಧರಿಸಲಾಗಿದೆ ಎಂದರು.

 

ಒಂದೇ ಸಿ‌ಇಟಿ ಪರೀಕ್ಷೆ ಕುರಿತು ತಿದ್ದುಪಡಿ ಮಾಡಲು ತಿರ್ಮಾನಿಸಲಾಗಿದೆ ಎಂದರು. ಇದಕ್ಕೆ ಖಾಸಗಿ ಆಡಳಿತ ಮಂಡಳಿ ಸಮ್ಮತಿಸಿದ್ದು ಸರ್ಕಾರ ಬರುವ ಮುಂಗಡ ಪತ್ರ ಅಧೀವೇಶನದಲ್ಲಿ ಕಾನುನೂ ತರಲಾಗುವುದು ಎಂದರು.   

 

 


Share: