ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ದೆಗೆ ಸಿದ್ದರಾದ ಉತ್ತರಕನ್ನಡ ಜಿಲ್ಲೆಯ ಸ್ಕೇಟರ್ಸ್‌ಗಳು

ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ದೆಗೆ ಸಿದ್ದರಾದ ಉತ್ತರಕನ್ನಡ ಜಿಲ್ಲೆಯ ಸ್ಕೇಟರ್ಸ್‌ಗಳು

Tue, 05 Dec 2023 04:53:39  Office Staff   SO News

ಕಾರವಾರ : 61ನೇ ರಾಷ್ಟ್ರ ಮಟ್ಟದ ರ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಗೆ ಉತ್ತರಕನ್ನಡ ಜಿಲ್ಲೆಯ 31 ಜನರು ಆಯ್ಕೆಯಾಗಿದ್ದಾರೆ. 

ಇತ್ತೀಚಿಗೆ ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಕ್‌ನಲ್ಲಿ ಆಯ್ಕೆಯಾದ ಸ್ಕೇಟರ್ಸ್‌ಗಳಿಗೆ ಹಾಕಿ ತರಬೇತಿ ನಡೆಯಿತು. 15 ದಿನಗಳ ಕಾಲ ನಡೆದ  ತರಬೇತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಕೈಗಾ,  ಶಿರಸಿ, ಮುಂಡಗೋಡು, ಯಲ್ಲಾಪುರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯದ ಬೆಂಗಳೂರು, ತುಮಕೂರು, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳ ಹಾಕಿ ಸ್ಕೇಟರ್ಸ್‌ಗಳು ಪಾಲ್ಗೊಂಡಿದ್ದರು.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮುಖ್ಯ ತರಬೇತುದಾರ ದಿಲೀಪ ಹಣಬರ, ತರಬೇತುದಾರ ಮಂಜಪ್ಪ, ಅಬಿದ್, ಸಚಿನ್ ಅವರು ತರಬೇತಿ ನೀಡಿದರು.

ತರಬೇತಿ ಪಡೆದ  ಸ್ಕೇಟರ್ಸ್‌ಗಳು ಡಿಸೆಂಬರ್ 10ರಿಂದ 21ರವರೆಗೆ ಚಂಡಿಗಢನಲ್ಲಿ ನಡೆಯುವ ನ್ಯಾಶನಲ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ತಂಡ ಪ್ರತಿನಿಧಿಸುವ ಉತ್ತರಕನ್ನಡ ಜಿಲ್ಲೆಯ ಎಲ್ಲಾ ಸ್ಕೇಟರ್ಸ್‌ಗಳು ಉತ್ತಮ ಸಾಧನೆ ಮಾಡಲಿ ಎಂದು ಪಾಲಕರು, ಶಾಲಾ ಮುಖ್ಯಾಧ್ಯಾಪಕರು ಶುಭ ಹಾರೈಸಿದ್ದಾರೆ.


Share: