ಬೆಂಗಳೂರು, ಜನವರಿ 4:ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳ ಉಪಯೋಗಕ್ಕಾಗಿ ಪಶ್ಚಿಮ ವಲಯದ ನಗರ ಕೇಂದ್ರ ಗ್ರಂಥಾಲಯದ ಎಂಸಿ ಲೇಔಟ್‌ನ ಅಧ್ಯಯನ ಕೇಂದ್ರಕ್ಕೆ ಡಾ ವಿಷ್ಣುವರ್ಧನ್ ಸ್ಮಾರಕ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಎಂದು ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಲೋಕಶಿಕ್ಷಣ, ಗ್ರಂಥಾಲಯ, ಸಣ್ಣ ಉಳಿತಾಯ ಮತ್ತು ಲಾಟರಿ ಸಚಿವರ ಪ್ರಸ್ತಾವನೆಯ ಮೇರೆಗೆ ನಾಡಿನ ಮಹಾನ್ ಕಲಾವಿದನ ನೆನಪಲ್ಲಿ ಈ ಅಧ್ಯಯನ ಕೇಂದ್ರಕ್ಕೆ ಡಾ ವಿಷ್ಣುವರ್ಧನ್ ಸ್ಮಾರಕ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಎಂದು ನಾಮಕರಣ ಮಾಡಲಾಗಿದೆ.