ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಕಾರವಾರ ವಿದ್ಯಾರ್ಥಿನಿ ಸಾಯಿಶ್ರೀ ಶೇಟ್ ತೃತೀಯ

ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಕಾರವಾರ ವಿದ್ಯಾರ್ಥಿನಿ ಸಾಯಿಶ್ರೀ ಶೇಟ್ ತೃತೀಯ

Wed, 20 Dec 2023 00:02:15  Office Staff   S O News

ಕಾರವಾರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಇವರು ಆಯೋಜಿಸಿದ್ದ ರಾಜ್ಯಮಟ್ಟದ ಭಾವಗೀತೆ ಸ್ವರ್ಧೆಯಲ್ಲಿ ಸಾಯಿಶ್ರೀ ಸಂತೋಷ ಶೇಟ್ ಇವಳು (ಸರಕಾರಿ ಪದವಿಪೂರ್ವ ಕಾಲೇಜು, ಕಾರವಾರ) ತೃತೀಯ ಸ್ಥಾನ ಗಳಿಸಿ ಕಾಲೇಜಿಗೂ, ಜಿಲ್ಲೆಗೂ ಕೀರ್ತಿ ತಂದಿರುತ್ತಾಳೆ.

ಇವಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ರಮೇಶ ಪತ್ರೇಕರ, ಕಾಲೇಜು ಸಿಬ್ಬಂದಿ ವರ್ಗದವರು, ದಿನಕರ ಕಲಾನಿಕೇತನ ಸಂಗೀತ ಶಾಲೆಯ ಶಿಕ್ಷಕರಾದ ಮಾರುತಿ ನಾಯ್ಕ, ಗಣಪತಿ ಹೆಗಡೆ ಅಭಿನಂದನೆ ಸಲ್ಲಿಸಿದ್ದಾರೆ.
 


Share: