ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಗಳೂರು: ಪರೀಕ್ಷೆಯಲ್ಲಿ ವಿಫಲಳಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಮಂಗಳೂರು: ಪರೀಕ್ಷೆಯಲ್ಲಿ ವಿಫಲಳಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Thu, 22 Oct 2009 17:44:00  Office Staff   S.O. News Service
ಮಂಗಳೂರು, ಅಕ್ಟೋಬರ್ 21:  ಎಂಬಿಬಿಎಸ್. ಪಾಸಾಗಿ ಕಳೆದ ಮೂರು ವರ್ಷಗಳಿಂದ ಪಿಜಿ ಕೋರ್ಸ್ ಒಂದಕ್ಕೆ ಪ್ರವೇಶ ಪರೀಕ್ಷೆ ಬರೆಯುತ್ತಿದ್ದರೂ ನಪಾಸಾಗುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಕುದುರೆಮುಖ ಕಾವೂರು ವಸತಿಗೃಹದ ನಿವಾಸಿ ಆಶಾದೇವಿ (27) ಎಂಬುವರು ಮೂರನೇ ಬಾರಿಗೆ ವಿಫಲರಾದ ದುಃಖವನ್ನು ತಡೆಯಲಾರದೇ ಮಿತಿಮೀರಿದ ಪ್ರಮಾಣದ ಮಾತ್ರೆ ಸೇವಿಸಿ ಸೇವಿಸಿದ್ದರು. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪರಿಸ್ಥಿತಿ ಕೈಮೀರಿತ್ತು.

Share: