ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಬಾರದು-ಮೋಹನ್ ಶ್ರೀಪಾದ ಸಂಕೊಳ್ಳಿ

ಚಿಕ್ಕಬಳ್ಳಾಪುರ: ಮಹಿಳೆಯರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಬಾರದು-ಮೋಹನ್ ಶ್ರೀಪಾದ ಸಂಕೊಳ್ಳಿ

Tue, 24 Nov 2009 17:47:00  Office Staff   S.O. News Service
ಚಿಕ್ಕಬಳ್ಳಾಪುರ, ನವೆಂಬರ್ ೨೩: ಶೋಷಣೆ ಮತ್ತು ದೌರ್ಜನ್ಯ ವಿರುದ್ದ ಹೋರಾಟ ರೂಪಿಸಲು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮೋಹನ್ ಶ್ರೀಪಾದ ಸಂಕೊಳ್ಳಿ ಹೇಳಿದರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಹಾಲು ಮಹಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಮಹಿಳಾ ಸಂಘಗಳ ಪ್ರತಿನಿಧಿಗಳಿಗೆ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಿಳೆಯರು ಅನ್ಯಾಯದ ವಿರುದ್ದ ಪ್ರತಿಭಟನೆ ನಡೆಸಿದಾಗ ಹಾಗೂ ಅತ್ಮವಿಶ್ವಾಸ ಮುನ್ನನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೇಳಿದರು.

ಮಹಿಳೆಯನ್ನು ಶಿಕ್ಷಣದ ಕಡೆಗೆ ಗಮನ ಅರಿಸುವಂತೆ ಮಾಡಬೇಕು ಉತ್ತಮ ಶಿಕ್ಷಣ ಹಾಗೂ ವಾತಾವರಣದಿಂದ ಮಹಿಳೆಯು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಹಿಳೆಯರು ಕಾನೂನಿನಲ್ಲಿ ಇರುವ ಕಾಯ್ದೆಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಶೋಷಣೆಗೆ ಒಳಗಾಗುವ ಮಹಿಳೆಯರು ದೈರ್ಯದಿಂದ ಹೋರಾಟ ನಡೆಸಬೇಕು ಎಂದರು.

ಕರ್ನಾಟಕ ಹಾಲು ಮಹಾಮಂಡಳಿ (ಸ್ಟೆಪ್)ಯ ಅಪರ ನಿರ್ದೇಶಕ ವಕೀಲ್ ಉರ್ ರೆಹಮಾನ್ ಮಾತನಾಡಿ ಹೈನುರಾಸು ನಿರ್ವಹಣೆಯಲ್ಲಿ ಮಹಿಳೆಯರದೆ ಹೆಚ್ಚಿನ ಪಾಲು. ಆದರೆ ಹೈನುರಾಸುಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ಇರುವ ತಾಂತ್ರಿಕ ಮಾಹಿತಿ ಮಹಿಳೆಯರಿಗೆ ದೊರಕುತ್ತಿಲ್ಲ. ಇದಕ್ಕಾಗಿ ಒಕ್ಕೂಟವು ಮಹಿಳೆಯರಿಗೆ ಹೈನುಗಾರಿಕೆ ಉದ್ದಿಮೆಯಲ್ಲಿ ಪ್ರೋತ್ಸಾಹಿಸಲು ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಧೀಶರಾದ ಗೋಪಾಲಕೃಷ್ಣ ಕೊಳ್ಳಿ, ಸಿವಿಲ್ ನ್ಯಾಯಾಧೀಶ, ಸಿ.ಜೆ.ಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಮದ್ ಮುಜಾಹಿದ್ ಉಲ್ಲಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಶ್ರೀಮತಿ ಜರೀನಾ ತಾಜ್, ಹಿರಿಯ ವಕೀಲ ಬಿ.ಆರ್.ನರಸಿಂಹಮೂರ್ತಿ, ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೇಶಕ ಕೆ.ವಿ.ನಾಗರಾಜ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಶ್ರೀಮತಿ ಎಸ್.ಶೋಭಾ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ನಾಮ ನಿರ್ದೇಶಿತ ನಿರ್ದೇಶಕ ಆರ್.ನಾರಾಯಣಪ್ಪ ಉಪಸ್ಥಿತರಿದ್ದರು.


Share: