ಭಟ್ಕಳ, ಡಿಸೆಂಬರ್ 31: ಭಟ್ಕಳದ ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ವತಿಯಿಂದ ಜ.೧ ಮತ್ತು ೨ ರಂದು ರಾಷ್ಟ್ರ ಮಟ್ಟದ ನಾತ್ ಸ್ಪರ್ಧೆ ಹಾಗೂ ಖಿರಾತ್ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೈಎಮ್‌ಎಸ್‌ಎ ಕಾರ್ಯದರ್ಶಿ ಮೌಲಾನ ಇಮ್ರಾನ್ ಅಕ್ರಮಿ ನದ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಾರುಲ್ ಉಲೂಮ್ ನದ್ವತುಲ್ ಉಲೇಮಾದ ಪ್ರಾಧ್ಯಾಪಕ ಮೌಲಾನ ಸೈಯ್ಯದ್ ಸಲ್ಮಾನ್ ಹುಸೇನಿ ನದ್ವಿ ಭಾಗವಹಿಸಲಿದ್ದಾರೆ.
ಜ.೧ ರಂದು ರಾತ್ರಿ ೮-೪೫ಕ್ಕೆ ವೈಎಮ್‌ಎಸ್‌ಎ ಮೈದಾನದಲ್ಲಿ ನಾತ್ ಸ್ಪರ್ಧೆ ನಡೆಯಲಿದ್ದು ೨ರಂದು ಕಿರಾತ್ ಪ್ರದರ್ಶನ ಏರ್ಪಡಿಸಲಾಗುವುದು. ಇದರಲ್ಲಿ ಖ್ಯಾತನಾಮ ಖಾರಿಗಳಾದ ಖಾರಿ ರಿಯಾಝ್ ಆಹ್ಮದ್ ಮಝಹೆರಿ, ಮೌಲಾನ ಖಾರಿ ವಾಸಿಫ್ ಖಾಸ್ಮಿ ದೇವಬಂದ್, ಖಾರಿ ಅಬ್ದುಲ್ ಹಾದಿ ಅನ್ಸಾರಿ, ಖಾರಿ ಇಮ್ತಿಯಾಜ್ ಸಾಹೆಬ್ ತಮಿಳುನಾಡು, ಖಾರಿ ಅಬ್ದುಲ್ ಕದೀರ್ ಮಹಾರಾಷ್ಟ್ರ, ಮೌಲಾನ ಖಾರಿ ಅನ್ಸಾರುಲ್ ಹಖ್ ನದ್ವಿ ಭೂಪಾಲಿ, ಖಾರಿ ಝಿಯಾವುರ್ರಹ್ಮಾನ್ ತಮಿಳುನಾಡು, ಖಾರಿ ಬದ್ರುದ್ದುಜಾ ತಮಿಳುನಾಡು, ಖಾರಿ ಹಾರೂನ್ ಸಾಹೇಬ್ ಮಹಾರಾಷ್ಟ್ರ, ಅಲ್ಲದೆ ಖ್ಯಾತ ನಾತ್ ರಚನಾಕಾರರಾದ ಡಾ. ಮುಹಮ್ಮದ್ ಹುಸೇನ್ ಫಿತ್ರತ್ ಭಟ್ಕಲಿ, ತಾಬಿಷ್ ಮೆಹ್ದಿ ದೆಹಲಿ, ಅಬ್ದುಲ್ ಬಾತಿನ ಫೈಝಿ, ಹಕೀಮುದ್ದೀನ್ ಹೈರತ್ ಹರದೋಯಿ, ತಾಬಿಷ್ ರೈಹಾನ್ ಫೈಜಾಬಾದ್ ಭಾಗವಹಿಸಲಿರುವರು. ನಾತ್ ಸ್ಪರ್ಧೆಯಲ್ಲಿ ಪ್ರಥಮ ಹತ್ತು ಸಾವಿರ, ದ್ವಿತೀಯಾ ಏಳು ಸಾವಿರ, ತೃತೀಯಾ ಐದು ಸಾವಿರ ನಗದು ಹಾಗೂ ಪ್ರಶಸ್ತಿಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ