ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಆಮ್ನಿ ವ್ಯಾನಿನಲ್ಲಿ ಕಳ್ಳಭಟ್ಟಿ ಸಾಗಾಟ - ಓರ್ವನ ಬಂಧನ

ಭಟ್ಕಳ: ಆಮ್ನಿ ವ್ಯಾನಿನಲ್ಲಿ ಕಳ್ಳಭಟ್ಟಿ ಸಾಗಾಟ - ಓರ್ವನ ಬಂಧನ

Thu, 04 Feb 2010 16:06:00  Office Staff   S.O. News Service

ಭಟ್ಕಳ, ಫೆಬ್ರವರಿ ೪,ಮಾರುತಿ ಓಮ್ನಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಳ್ಳಭಟ್ಟಿಯನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮುರ್ಡೇಶ್ವರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಬಂಧಿತನನ್ನು ಹೊನ್ನಾವರ ಗುಣವಂತೆಯ ನಾಗರಾಜ ಮಂಜು ಗೌಡ ಎಂದು ಗುರುತಿಸಲಾಗಿದೆ. ಈತ ನಿನ್ನೆ ಬೆಳಿಗ್ಗೆ ಮಾರುತಿ ಓಮ್ನಿ (ಕೆ ಎ ೩೦ ೧೨೬೭)ಯಲ್ಲಿ ಅನಧಿಕೃತವಾಗಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ೮೭೫ ಮೌಲ್ಯದ ೩೫ ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಪ್ಲಾಸ್ಟಿಕ ಚೀಲದಲ್ಲಿ ಹಾಕಿಕೊಂಡು ಮುರ್ಡೇಶ್ವರದ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಬಸ್ತಿ ಮಕ್ಕಿಯಲ್ಲಿ ಕ್ರೈಂ ಎಸೈ ಸಿ ಎಂ ಭಜಂತ್ರಿ ನೇತೃತ್ವ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

 


Share: