ಶಿವಮೊಗ್ಗ, ಅ.3: ವಿಶ್ವ ಪ್ರಸಿದ್ಧ ಜೋಗ ಜಲಪಾತ ವಿಕ್ಷಣೆಗೆ ತೆರಳಿದ್ದ ಏಳು ಮಂದಿ ಪ್ರವಾಸಿಗರಿಗೆ ಲಿಂಗನಮಕ್ಕಿ ಹಿನ್ನೀರಿನಲ್ಲಿ ಜಲದಿಗ್ಭಂಧನಕ್ಕೆ ಸಿಲುಕಿದವರನ್ನು ಸಮೀಪದ ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
‘ಮುಂಗಾರು ಮಳೆ’ ಸಿನಿಮಾ ಚಿತ್ರಿಕರಿಸಿದ್ದ ಸ್ಥಳ ವಿಕ್ಷಣೆ ದಾವಣಗೆರೆ ಜಿಲ್ಲೆಯ ಹರಿಹರದ ಏಳು ಮಂದಿ ಪ್ರವಾಸಿಗರು ತೆರಳಿದ್ದರು. ಸಂಜೆ ೬ಗಂಟೆಯ ಸುಮಾರಿಗೆ ಏಕಾಏಕಿ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದರು. ಅವರೆಲ್ಲ ತಕ್ಷಣವೇ ಮರಗಳನ್ನು ಏರಿ ಕುಳಿತರು.
ಇದನ್ನು ಗಮನಿಸಿದ ಸ್ಥಳೀಯರು ಜಲಾಶಯದ ಎಂಜಿನಿಯರ್ಗಳನ್ನು ಸಂಪರ್ಕಿಸಿ ಜಲಾಶಯದಿಂದ ನೀರು ನಿಲ್ಲಿಸಲು ಸೂಚಿಸಿ ಅನಂತರ ಹಗ್ಗ ಸಹಾಯದಿಂದ ಏಳು ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.