ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕೊಪ್ಪಳ ಅವಾಚ್ಯ ನಿಂದನೆ : ಮೂವರು ಶಿಕ್ಷಕರ ಅಮಾನತು

ಕೊಪ್ಪಳ ಅವಾಚ್ಯ ನಿಂದನೆ : ಮೂವರು ಶಿಕ್ಷಕರ ಅಮಾನತು

Sat, 24 Apr 2010 12:56:00  Office Staff   S.O. News Service
   ಕೊಪ್ಪಳ ಏ. ೨೪,ಅವಾಚ್ಯ ಪದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ತಾಲೂಕಿನ ಮೂವರು ಶಿಕ್ಷಕರನ್ನು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ. ರಾಜೇಂದ್ರ ಪ್ರಸಾದ್ ಅವರು ಅಮಾನತುಗೊಳಿಸಿದ್ದಾರೆ.
     ದ್ಯಾಂಪುರದ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಹೇಶ್ ಸಬರದ, ಗೊರ್ಲೆಕೊಪ್ಪದ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೀರನಗೌಡ ಪಾಟೀಲ ಹಾಗೂ ತುಮ್ಮಲಗುದ್ದಿಯ ಹಿರಿಯ ಪ್ರಾಥಮಿಕ ಶಾಲೆ ಸಹಶಿಕ್ಷಕ ಶರಣೇಗೌಡ ಪಾಟೀಲ ಇವರೆ ಅಮಾನತುಗೊಂಡಿರುವ ಶಿಕ್ಷಕರು.  ಈ ಶಿಕ್ಷಕರು ಯಲಬುರ್ಗಾದ ಕ್ಷೇತ್ರ ಸಮನ್ವಯಾಧಿಕಾರಿ ತುಳಸಿರಾಮ ಕುಂಬಾರೆ, ಐ‌ಇ‌ಆರ್‌ಟಿ ಎಸ್.ಜಿ. ಹವಾಲ್ದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಪೊಲೀಸ್ ಪಾಟೀಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.  ಇವರ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಿದ ಶಿಫಾರಸ್ಸಿನ ಅನ್ವಯ ಸರ್ಕಾರಿ ಸೇವಾ ನಿಯಂತ್ರಣ ನಿಯಮದ ಮೇರೆಗೆ ಮೂವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: