ಮಂಜೇಶ್ವರ, ಡಿಸೆಂಬರ್ 1 : ಮೀಯಪದವಿನಿಂದ ಕೋಮಂಗಳ ಕಡೆಗೆ ಜಲ್ಲಿ ಹೇರಿಕೊಂಡು ಬರುತ್ತಿದ್ದ ಪಿಕಪ್ ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಪರಿಣಾಮ ಒರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ 9.30 ರ ವೇಳೆಗೆ ಪೈವಳಿಕೆಯ ಕುಲಾಯಿ ಎಂಬಲ್ಲಿ ನಡೆದಿದೆ. ಮೃತನನ್ನು ಪೈವಳಿಕೆ ಕಳಿಯನಡುಕ್ಕ ನಿವಾಸಿ ಹಮೀದ್‌ರ ಪುತ್ರ ಮುಹಮ್ಮದ್ ಶಾಫಿ(22) ಎಂದು ಗುರುತಿಸಲಾಗಿದೆ.



ಪಿಕಪ್ ವ್ಯಾನಿನಲ್ಲಿದ್ದ ಚಾಲಕ ಮದಂಕಾಲಿನ ರಹೀಂ, ಬೇರಿಕೆಯ ಮುಸ್ತಫಾ, ಹನೀಫ್, ಅಬೂಬಕ್ಕರ್ ,ಇಬ್ರಾಹಿಂ, ಖಾದರ್, ಇಬ್ರಾಹಿ ಎಂಬಿವರನ್ನು ಸಣ್ನ ಪುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಅದೃಷ್ಟವಶಾತ್ ಬಾರೀ ಅನಾಹುತದಿಂದ ಪಾರಾಗಿದ್ದಾರೆ. ಶಾಫಿಯ ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್ಚ್.ಸಿ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಯವರಿಗೆ ಬಿಟ್ಟುಕೊಡಲಾಯಿತು. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರ, ವರದಿ: ಆರಿಫ್, ಮಂಜೇಶ್ವರ