ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ: ಪ್ರೊ.ಮರುಳುಯ್ಯ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ: ಪ್ರೊ.ಮರುಳುಯ್ಯ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Sat, 01 May 2010 09:05:00  Office Staff   S.O. News Service

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ: ಪ್ರೊ.ಮರುಳುಯ್ಯ

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮಂಗಳೂರು, ಎ.30: ಮಕ್ಕಳಲ್ಲಿ ನಮ್ಮ ಸೂಕ್ಷ್ಮತೆಗೂ ಮೀರಿದ ಪ್ರತಿಭೆಗಳಿದ್ದು, ಸಜನಶೀಲ ಶಕ್ತಿಯೂ ಅವರಲ್ಲಿದೆ. ಹಾಗಾಗಿ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಹುಟ್ಟಿಸುವ ಮೂಲಕ ಅವರ ಚೇತನವನ್ನು ಬೆಳಗಿಸಿ ಎಂದು ಖ್ಯಾತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಪ್ರೊ. ಸಾ.ಶಿ.ಮರುಳಯ್ಯ ಕರೆ ನೀಡಿದರು.

ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಸಂಸ್ಕೃತಿ ಕೇವಲ ಸಾಹಿತ್ಯ ಕತಿ ಗಳಲ್ಲಿ ತುಂಬಿ ಹೋಗಿದೆ. ಅದನ್ನು ಬದುಕಿ ನಲ್ಲಿ ಅಳವಡಿಸಬೇಕು. ಅದರ ಜತೆಗೆ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಬೇಕು. ಅನುಭವದ ಸಾರವನ್ನು ಸಾಹಿತ್ಯದ ಮೂಲಕ ಹೊರ ಚೆಲ್ಲಬೇಕು. ಅನುಭವವಿಲ್ಲದ ಸಾಹಿತ್ಯ ಬಂಜೆ ಗೋವಿನ ಕೆಚ್ಚಲಿನಂತೆ ಎಂದು ಸಾ.ಶಿ. ಮರುಳಯ್ಯ ನುಡಿದರು.

ಸಾಹಿತಿಗಳಲ್ಲಿ ಸಮಾಜ ಸೇವಾ ಮನೋಭಾವವಿರಲಿ : ಸಮ್ಮೇಳನಾಧ್ಯಕ್ಷ ಬೋಳ ಚಿತ್ತರಂಜನ್ ದಾಸ್

ನೀನು ಸಮಾಜದಲ್ಲಿ ಏನಾಗಬಯಸುತ್ತೀಯೋ ಅದೆಲ್ಲವನ್ನೂ ಬದಿಗಿರಿಸಿ ಮೊದಲು ದಾಸನಾಗು ಎಂದು ದಾಸ ಪರಂಪರೆಯ ಹಿರಿಯರು ಹೇಳಿದ್ದಾರೆ. ಅದರಂತೆ ಸಾಹಿತಿ ಕೂಡ ಅಹಂ ಬದಿಗಿಟ್ಟು ಸಮಾಜ ಸೇವಾ ಮನೋಭಾವ ಬೆಳೆಸಿಕೊಂಡರೆ, ಅದು ಸಾಹಿತಿಗೆ ಮಾತ್ರವಲ್ಲ ಸಮಾಜಕ್ಕೂ ಒಳಿತಾದೀತು ಎಂದು ಸಮ್ಮೇಳನಾಧ್ಯಕ್ಷ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಅಭಿಪ್ರಾಯಪಟ್ಟರು.

 ಸಮಾಜಕ್ಕೊಂದು ಕೆಟ್ಟ ಹವ್ಯಾಸವಿದೆ. ನೀನು ಗುಲಾಮನಾದರೆ ನಾನು ನಿನ್ನ ಮೇಲೆ ಸವಾರಿ ಮಾಡುತ್ತೇನೆ ಎನ್ನುತ್ತದೆ ಸಮಾಜ. ಹಾಗಾಗಿ ಅದು ನಮ್ಮ ಮೇಲೆ ಸವಾರಿ ಮಾಡುವ ಮೊದಲೇ ನಾವು ಅಹಂ ಬದಿಗಿಟ್ಟು ನಯವಿನಯದಿಂದ ವರ್ತಿಸಿದರೆ ಅದರಿಂದ ಎಲ್ಲರಿಗೂ ಹಿತವಿದೆ. ಸಾಹಿತ್ಯವು ಕೀರ್ತಿ ಪ್ರತಿಷ್ಠೆಗಾಗಿ ಅಲ್ಲ. ಅದು ಸಮಾಜದ ಋಣ ತೀರಿಸಲು. ಬದುಕಿನ ಪ್ರತೀ ಹೆಜ್ಜೆಗೂ ಸಮಾಜ ದಲ್ಲಿ ಪಾಠ ಕಲಿಯಲು ನಿರ್ಮಲ ಮನಸ್ಸು, ಬುದ್ಧಿ ನಮ್ಮಲ್ಲಿ ಅವತರಿಸುವುದಕ್ಕೆ ಸಾಹಿತ್ಯ ಎನ್ನುತ್ತಾರೆ ಎಂದು ಬೋಳ ತಿಳಿಸಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ, ಹಿರಿಯ ಸಾಹಿತಿ ಪ್ರೇಮಾ ಭಟ್, ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕರಾದ ಅಭಯಚಂದ್ರ ಜೈನ್, ಯೋಗೀಶ್ ಭಟ್, ಯು.ಟಿ. ಖಾದರ್, ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರಕುಮಾರ್, ಮನಪಾ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಕಣ್ಣೂರು, ಶಾಂತಾ ಆರ್., ರೂಪ ಡಿ.ಬಂಗೇರ, ಮನಪಾ ಮುಖ್ಯ ಸಚೇತಕ ರಂಗನಾಥ ಕಿಣಿ, ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಬೋಳ ರಾಧಾಕಷ್ಣ ರಾವ್, ನಿಟ್ಟೆ ವಿ.ವಿ. ಕುಲಪತಿ ಡಾ.ಎಂ. ಶಾಂತಾರಾಮ ಶೆಟ್ಟಿ, ಮಂಗಳೂರು ವಿ.ವಿ. ಉಪಕುಲಸಚಿವ ಪ್ರಭಾಕರ ನೀರ್‌ಮಾರ್ಗ, ಹಿರಿಯ ಅಂಚೆ ಅಧೀಕ್ಷಕ ಟಿ.ಜಿ.ನಾಯ್ಕಿ, ಎಂ.ಶೇಖರ ಪೂಜಾರಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ ಮತ್ತಿತರಿದ್ದರು.

ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಸರ್ವೋತ್ತಮ ಅಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮ್ಮಾರ್ ಮತ್ತು ಕೆ.ಕೆ. ಪೇಜಾವರ ಕಾರ್ಯಕ್ರಮ ನಿರೂಪಿಸಿದರು.


Share: