ಭಟ್ಕಳ,ಫೆಬ್ರವರಿ ೨೨:ಯಾವಗಲೂ ಕೇವಲ ಶಿಕ್ಷೆ ಹಾಗೂ ಹದರಿಸಿ ಬೆದರಿಸಿ ಪ್ರಕರಣಗಳನ್ನು ಬೇಧಿಸುವ ಪೋಲಿಸರು ಉತ್ತಮ ಕಾರ್ಯವನ್ನು ಮಾಡಿದವರನ್ನು ಪ್ರಶಂಸಿಸುತ್ತಾರೆ ಎನ್ನುವುದಕ್ಕೆ ಇಲ್ಲಿನ ನಗರಠಾಣೆಯಲ್ಲಿ ಕಳ್ಳರನ್ನು ಹಿಡಿಯಲು ಸಹಕರಿಸಿದ ಯುವ ಉತ್ಸಾಹಿಗಳಿಗೆ ಪ್ರಶಂಸೆ ಹಾಗೂ ಬಹುಮಾನ ವಿತರಣೆಯೆ ಸಾಕ್ಷಿ ಎನ್ನಬಹುದು.
ಇತ್ತಿಚಿಗೆ ಭಟ್ಕಳದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಸಾರ್ವಜನಿಕರು ಸಹಕಾರವನ್ನು ಶ್ಲಾಘಿಸಿದ ಡಿವೈಎಸ್ಪಿ ವೇದಮೂರ್ತಿ ಸಮೀರ್ ಹಾಗೂ ಸುಭಾನ್ ಎಂಬುವವರಿಗೆ ಸರಕಾರವು ನೀಡಿದ ಬಹುಮಾನವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾನೂನು ಸುವೈವಸ್ಥೆಯನ್ನು ಕಾಪಾಡಿಕೊಂಡು ಹೋಗುವಲ್ಲಿ ಸಾರ್ವಜನಿಕರು ಸಹಕಾರ ಅತ್ಯಗತ್ಯ. ಸಮೀರ ಹಾಗೂ ಸುಬಾನ್ ಉಳಿದವರಿಗೆ ಮಾದರಿಯಾಗಲಿ ಎಂದರು.