ಬೆಂಗಳೂರು, ಏಪ್ರಿಲ್ ೨೩, : ಭಾರತ ಸರ್ಕಾರವು ೨೦೧೦ನೇ ಸಾಲಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ವ್ಯಕ್ತಿಗಳಿಗೆ ರಾಜೀವ್‌ಗಾಂಧಿ ಮಾನವ ಸೇವಾ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ೧೦ ವರ್ಷಕಿಂತ ಹೆಚ್ಚು ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಬರುವ ವ್ಯಕ್ತಿಗಳು ನಿಗದಿತ ಅರ್ಜಿ ನಮೂನೆಯನ್ನು ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ತ್ರಿಪ್ರತಿಯಲ್ಲಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ,
ಬೆಂಗಳೂರು-೨೯, ಇಲ್ಲಿ ದಿನಾಂಕ ೧೦-೦೫-೨೦೧೦ ರೊಳಗೆ ಸಲ್ಲಿಸಬೇಕಾಗಿ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಯು ನಗದು ರೂ:೧ ಲಕ್ಷದ ಬಹುಮಾನ ಹಾಗು ಪ್ರಮಾಣ ಪತ್ರ ಹೊಂದಿರುತ್ತದೆ.