ಸಕಲೇಶಪುರ:-ತಾಲ್ಲೂಕಿನ ಹೆತ್ತೂರು ಗ್ರಾಮ ದೇವರಾದ ಶ್ರೀ ಮಲ್ಲೇಶ್ವರ ಸ್ವಾಮಿ ನೂತನ ದೇವಾಲಯ ಉದ್ಘಾಟನಾ ಮಹೂತ್ಸವ ೧೬ ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ೧೬ ರಂದು ಬೆಳಿಗ್ಗೆ ೬ ಕ್ಕೆ ಗ್ರಾಮ ದೇವತೆ ಪ್ರಾರ್ಥನೆ ಆರಂಭವಾಗಲಿದ್ದು ಸಂಜೆ ೬.೩೦ ಕ್ಕೆ ಮಹಾಗಣಪತಿ ಪೂಜೆ ನೇರವೇರಲಿದೆ ೧೭ ರಂದು ಬೆಳಿಗ್ಗೆ ೫ ಗಂಟೆಗೆ ಮೂರ್ತಿ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮ ೭ ಗಂಟೆಗೆ ೧೦೮ ಮಹಿಳೆಯರಿಂದ ಕುಂಭ ಮೆರವಣಿಗೆ ನಂತರ ಧಾರ್ಮಿಕ ಕಾರ್ಯಗಳು ನಡೆಯಲಿವೆ.
೧೮ ರಂದು ದೇವಾಲಯ ಉದ್ಘಾಟನ ಕಾರ್ಯಕ್ರಮವನ್ನು ಬೆಳಿಗ್ಗೆ ೧೦ ಕ್ಕೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಅದಿಚುಂಚುನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿಜಿ ವಹಿಸಲಿದ್ದರೆ. ದರ್ಮಸ್ಥಳದ ಧರ್ಮಾಧಿಕಾರಿ ಡಾ; ವಿರೇಂದ್ರ ಹೆಗ್ಗಡೆ, ಆದಿಚುಂಚುನಗಿರಿ ಸಂಸ್ಥಾನದ ಶಾಖಾ ಮಠದ ಶಂಬುನಾಥ ಸ್ವಾಮಿಜಿ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಪ್ರದಾನಿ ಹೆಚ್.ಡಿ ದೇವೆಗೌಡ ನರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹೆಚ್.ಕೆ ಕುಮಾರಸ್ವಾಮಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೃಹ ಸಚಿವ ವಿ.ಎಸ್ ಆಚಾರ್ಯ,ವೈದ್ಯಕೀಯ ಸಚಿವ ರಾಮಚಂದ್ರೇಗೌಡ, ಜೆ.ಡಿ ಎಸ್ ಶಾಸಕಾಂಗ ಪಕ್ಷದ ನಾಯಕರಾದ ಹಚ್.ಡಿ ರೇವಣ್ಣ, ಶಾಸಕರಾದ ಎ. ಮಂಜು, ಪಟೇಲ್ ಶಿವರಾಂ, ಮಾಜಿ ಶಾಸಕರಾದ ಗುರುದೇವ್,ಹೆಚ್.ಎಂ ವಿಶ್ವನಾಥ್, ಬಿ.ಬಿ ಶಿವಪ್ಪ ಮುಂತಾದವರು ಬಾಗವಹಿಸಲಿದ್ದಾರೆ.