ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ: ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು...

ನವದೆಹಲಿ: ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು...

Fri, 26 Feb 2010 09:42:00  Office Staff   S.O. News Service

ದೇಶದ ಅರ್ಥ ವ್ಯವಸ್ಥೆ ಶೀರ್ಘದಲ್ಲಿಯೇ ಗರಿಷ್ಠ ಮಟ್ಟದ ಆರ್ಥಿಕ ವೃದ್ಧಿ ದರಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಣವ್ ಮುಖರ್ಜಿ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಕೆಲವು ರಿಯಾಯತಿಗಳನ್ನು ಘೋಷಿಸಿದ್ದಾರೆ. 

ನವದೆಹಲಿ (ಪಿಟಿಐ): 1.6 ಲಕ್ಷದ ವರೆಗಿನ ವರಮಾನ ಹೊಂದಿರುವವರು ಇನ್ನು ಮುಂದೆ ಆದಾಯ ತೆರಿಗೆ ಪಾವತಿಸ ಬೇಕಾಗಿಲ್ಲ. ಇದರಿಂದ ದೇಶದ 60% ರಷ್ಟು ಜನರಿಗೆ ತೆರಿಗೆ ಹೊರೆ ತಪ್ಪಲಿದೆ.

ಹೊಸ ಆದಾಯ ತೆರಿಗೆ ನೀತಿಯನ್ವಯ 
1.6 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ.
1.6 ಲಕ್ಷದಿಂದ 5 ಲಕ್ಷದ ನಡುವಿನ ಆದಾಯ ಹೊಂದಿರುವವರು ಶೇಕಡ 10 ರಷ್ಟು ತೆರಿಗೆ ಪಾವತಿಸಬೇಕು.
5 ಲಕ್ಷಕ್ಕಿಂತ ಹೆಚ್ಚು, 8 ಲಕ್ಷದ ಒಳಗಿನ ಆದಾಯ ಹೊಂದಿರುವವರು ಶೇಕಡ 20 ರಷ್ಟು ತೆರಿಗೆ ಪಾವತಿಸಬೇಕು.
8 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಶೇಕಡ 30 ರಷ್ಟು ಆದಾಯ ತೆರಿಗೆ ಪಾವತಿಸಬೇಕು.

ಬಜೆಟ್ ೨೦೧೦: ಕೆಟ್ಟದ್ದಕ್ಕೆ ಬೈ, ಸವಾಲುಗಳು ಅನೇಕ

ನವದೆಹಲಿ: ಆರ್ಥಿಕ ಬಿಕ್ಕಟ್ಟು ಎಂಬ ಸಂಕಷ್ಟವನ್ನು ಭಾರತ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಿದೆ ದೇಶದ ಮುಂದಿದೆ ಎಂದು ೨೦೧೦-೧೧ ರ ಕೇಂದ್ರ ಬಜೆಟ್‌ನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸುವಾಗ ವಿತ್ತ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಈಗಾಗಲೇ ದೇಶದ ನಿವ್ವಳ ತಲಾದಯವು ಶೇ ೯ಕ್ಕೆ ಏರಿದ್ದು, ಕೆಲವೇ ತಿಂಗಳುಗಳಲ್ಲಿ ಇದನ್ನು ಇರಡು ಅಂಕಿಗಳಿಗೆ ತರುವುದು ಈಗ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದು ಎಂದು ಪ್ರಣಬ್ ಹೇಳಿದರು. ಅಲ್ಲದೇ ಈ ಬೆಳವಣಿಗೆಯನ್ನು ಎಲ್ಲ ಸಾವಾಲುಗಳಲ್ಲಿ ಒಳಗೊಳ್ಳುವಂತೆ ಮಾಡುವುದು ಅತ್ಯಂತ ಅವಶ್ಯಕ ಎಂದು ಅವರು ತಿಳಿಸಿದರು.

ಬಜೆಟ್‌ನ ಮುಖ್ಯಾಂಶಗಳು

ಭಾರತ ಆರ್ಥಿಕ ಸಂಕಷ್ಟವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ 
ಕಳೆದ ವರ್ಷದ ಆರ್ಥಿಕ ಪರಿಸ್ಥಿತಿಗಿಂತ ಭಾರತ ಸುಧಾರಿಸಿದೆ. ಆದರೆ ಸವಾಲುಗಳು ಅನೇಕ 
ಕಳೆದ ವರ್ಷದಲ್ಲಿ ಮೂರು ಸಾವಾಲುಗಳನ್ನು ಮತ್ತು ಮಧ್ಯಮಾವಧಿ ದೃಷ್ಟಿಕೋನವನ್ನು ಇಟ್ಟು ಕೊಳ್ಳಲಾಗಿತ್ತು

ಮೊದಲ ಸವಾಲು: ವಾರ್ಷಿಕ ನಿವ್ವಳ ತಲಾದಾಯದ ಬೆಳವಣಿಗೆಯನ್ನು ಶೇ ೯ಕ್ಕೆ ಏರಿಸುವುದು ಮತ್ತು ಅದನ್ನು ಆದಷ್ಟು ಬೇಗ ಶೇ ೧೦ರ ಗಡಿಯನ್ನು ದಾಟಿಸುವದು

ಎರಡನೇ ಸವಾಲು: ಸರಂಜಾಮು ಆರ್ಥಿಕ ಬೆಳವಣಿಗೆಯನ್ನು ಒಳಗೊಳ್ಳುವಂತೆ ಮಾಡುವುದು. ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೈಕರ್ಯಗಳ ಬೆಳವಣಿಗೆ ಮತ್ತು ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವುದು

ಮೂರನೇ ಸವಾಲು: ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಇರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ ಉತ್ತಮಗೊಳಿಸುವುದು

ಈ ವರ್ಷದ ಬಜೆಟ್‌ನಲ್ಲಿ ಈ ಕೆಳಕಂಡಂತೆ ಹಣವನ್ನು ಕಾದಿರಿಸಲಾಗಿದೆ

ಭಾರತೀಯ ರೈಲ್ವೆಗೆ ೧೬,೭೮೨ ಕೋಟಿ ರೂಗಳು 
ಗಂಗಾ ನದಿಯ ಸ್ವಚ್ಛತೆಗೆ ೫೦೦ ಕೋ. 
ಶಿಕ್ಷಣಕ್ಕೆ ೨೦ ಕೋಟಿಯ ಅನುದಾನ ಹೆಚ್ಚಳ 
ಉದ್ಯೋಗ ಖಾತ್ರಿಗೆ ೪೦,೧೦೦ ಕೋ. 
ಭಾರತ್ ನಿರ್ಮಾಣ ಯೋಜನೆಗೆ ೪೧,೦೦೦ ಕೋ. 
ಮೂಲ ಸೌಕರ್ಯಕ್ಕೆ ೭೩ ಲಕ್ಷ ಕೋಟಿ 
೧೦ ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ ೧ ರಷ್ಟು ಸಬ್ಸಿಡಿ ಮುಂದುವರೆಕೆ 
ಇಂದಿರಾ ಆವಾಸ್ ಯೋಜನೆಗೆ ೧೦,೦೦೦ ಕೋಟಿ 
ಕೃಷಿ ಸಾಲ ಮರುಪಾವತಿ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆ 
ಎರಡು ಸಾವಿರ ಜನಸಂಖ್ಯೆ ಇರುವ ಪ್ರದೇಶಗಳಿಗೆ ಒಂದು ಬ್ಯಾಂಕ್ 
ವಿಶಿಷ್ಟ ಗುರುತಿನ ಸಂಖ್ಯೆ ವಿತರಿಸಲು ೧,೯೦೦ ಕೋ.ರೂ

ಬಜೆಟ್ ಮುಖ್ಯಾಂಶಗಳು

ಕೃಷಿ ಮತ್ತು ರೈತರ ಕ್ಷೇತ್ರ...
* ರೈತರ ಸಾಲ ಮರುಪಾವತಿ ಅವಧಿ ಆರು ತಿಂಗಳಿಗೆ ವಿಸ್ತರಣೆ.
* ರೈತರಿಗೆ ಶೇ.5ರ ಬಡ್ಡಿದರದಲ್ಲಿ ಸಾಲ.
* ರೈತರ ಸಾಲದ ಮೇಲೆ ಕೇಂದ್ರದಿಂದ ಶೇ.2ರಷ್ಟು ಸಬ್ಸಿಡಿ.
* ರೈತರ ಸಾಲ ವಿತರಣೆಗೆ 3.75 ಲಕ್ಷ ಕೋಟಿ ಮೀಸಲು.
* ಈ ವರ್ಷ ರಸಗೊಬ್ಬರ ದರ ಏರಿಕೆ ಮಾಡುವುದಿಲ್ಲ.
* ರಸಗೊಬ್ಬರ ಸಬ್ಸಿಡಿ ಇಳಿಕೆ.
* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 300 ಕೋಟಿ ರೂ.
* ಸಹಾಯಧನದ ಮೊತ್ತ ರೈತರಿಗೆ ನೇರವಾಗಿ ಸಿಗುವಂತೆ ನೂತನ ಪದ್ಧತಿ.
* 2010ರಲ್ಲಿ ಕೃಷಿ ಉತ್ಪಾದನೆಯಲ್ಲಿ ಪ್ರಗತಿ.

ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರ...
* ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1,73,552 ಕೋಟಿ ರೂಪಾಯಿ.
* ಆರೋಗ್ಯ ವಲಯದ ಅಭಿವೃದ್ಧಿಗೆ 22.300 ಕೋಟಿ ರೂ. ಅನುದಾನ.
* ಗ್ರಾಮೀಣಾಭಿವೃದ್ಧಿಗೆ 66.100 ಕೋಟಿ ರೂ. ಅನುದಾನ
* ಆಹಾರ, ಭದ್ರತೆ, ಶಿಕ್ಷಣಕ್ಕೆ ಒತ್ತು
* ಶಿಕ್ಷಣ ಕ್ಷೇತ್ರಕ್ಕೆ 20,000 ಕೋಟಿ ಅನುದಾನ ಹೆಚ್ಚಳ
* ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯಗಳಿಗೆ 3675 ಕೋಟಿ.
* ಅಸಂಘಟಿತ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂ.
* ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 40,100 ಕೋಟಿ
* ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್
* ನಗರಗಳಲ್ಲಿ ರೋಜಗಾರ್ ಯೋಜನೆಗೆ 5,600 ಕೋಟಿ

ತೆರಿಗೆ ಹೆಚ್ಚಳ - ಕಡಿಮೆಯಾದುವು...
* ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಳ.
* ಕಚ್ಚಾ ಪೆಟ್ರೋಲಿಯಂ ಮೇಲೆ ಶೇ.5ರಷ್ಟು ತೆರಿಗೆ.
* ಬೀಡಿ, ಸಿಗರೇಟು, ಗುಟ್ಕಾಗಳ ಮೇಲಿನ ತೆರಿಗೆ ಹೆಚ್ಚಳ.
* ಕಾರು ಮತ್ತು ಇತರ ಆಮದು ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
* ಸಿಮೆಂಟ್ ದರದಲ್ಲಿ ಮತ್ತಷ್ಟು ಹೆಚ್ಚಳ
* ಕೃಷಿ, ಯಂತ್ರೋಪಕರಣಗಳ ದರದಲ್ಲಿ ಅಗ್ಗ.
* 1.6 ಲಕ್ಷ ವಾರ್ಷಿಕ ವರಮಾನವುಳ್ಳವರಿಗೆ ತೆರಿಗೆಯಿಲ್ಲ.
* 1.6 ಲಕ್ಷದಿಂದ 5 ಲಕ್ಷದವರೆಗೆ ಶೇ.10 ತೆರಿಗೆ
* 5 ಲಕ್ಷದಿಂದ 8 ಲಕ್ಷದವರೆಗೆ ಶೇ.20 ತೆರಿಗೆ
* 8 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಶೇ.30ರ ತೆರಿಗೆ
* ಸೆಕ್ಷನ್ 80 ಸಿ ಅಡಿಯ ತೆರಿಗೆ ವಿನಾಯಿತಿಯಲ್ಲಿ 20 ಸಾವಿರ ಹೆಚ್ಚಳ
* ಪವನ ವಿದ್ಯುತ್ ಯಂತ್ರಗಳ ಮೇಲಿನ ತೆರಿಗೆ ರದ್ದು.
* ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರಗಳ ಮೇಲಿನ ಆಮದು ಸುಂಕ ಹೆಚ್ಚಳ
* 10 ಗ್ರಾಂ ಚಿನ್ನದ ಮೇಲೆ 300 ರೂಪಾಯಿ ಆಮದು ಸುಂಕ.
* ಪ್ರತೀ ಕಿಲೋ ಬೆಳ್ಳಿಯ ಮೇಲೆ 1,500 ರೂಪಾಯಿ ಆಮದು ತೆರಿಗೆ.
* ಎಸಿ, ಫ್ರಿಡ್ಜ್‌ಗಳ ಮೇಲಿನ ತೆರಿಗೆ ಹೆಚ್ಚಳ
* ಭಾರತೀಯ ಕಲ್ಲಿದ್ದಲು ಪ್ರತೀ ಟನ್ ಮೇಲೆ 50 ರೂಪಾಯಿ ತೆರಿಗೆ.
* ದೇಶಿ ಮೊಬೈಲ್ ಅಗ್ಗ, ಆಟಿಕೆಗಳ ಬೆಲೆ ಕಡಿಮೆ.

ಇತರ ಮುಖ್ಯಾಂಶಗಳು...
* ರಕ್ಷಣಾ ವೆಚ್ಚ 1,47,334 ಕೋಟಿಗೆ ಏರಿಕೆ
* ಪೆಟ್ರೋಲಿಯಂ ದರ ನಿಗದಿ (ನಿಯಂತ್ರಣ ಮುಕ್ತ) ಕುರಿತು ಪಾರೀಖ್ ಸಮಿತಿ ಶಿಫಾರಸು ಪರಿಗಣನೆ.
* 25 ಸಾವಿರ ಕೋಟಿ ರೂ. ಬಂಡವಾಳ ಹಿಂತೆಗೆತ.
* ಸಾರ್ವಜನಿಕ ಕ್ಷೇತ್ರದಿಂದ ಬಂಡವಾಳ ವಾಪಸ್
* 2010ರ ಏಪ್ರಿಲ್ ತಿಂಗಳಿಂದ ನೇರ ತೆರಿಗೆ ಪದ್ಧತಿ ಜಾರಿ
* ತೆರಿಗೆ ಪದ್ಧತಿಯನ್ನು ಸರಳೀಕೃತಗೊಳಿಸಲು ಅಗತ್ಯ ಕ್ರಮ
* ಬೆಲೆ ಏರಿಕೆ ನಿಯಂತ್ರಣಕ್ಕೆ ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ.
* ಖಾಸಗಿ ಕ್ಷೇತ್ರಕ್ಕೆ ಹೆಚ್ಚುವರಿ ಬ್ಯಾಂಕಿಂಗ್ ಪರವಾನಗಿ
* ಕೇಂದ್ರದಿಂದ ಸರಕಾರಿ ಬ್ಯಾಂಕುಗಳಿಗೆ 1,200 ಕೋಟಿ ಸಹಾಯಧನ.
* ಅಭಿವೃದ್ಧಿಗಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ 16,500 ಕೋಟಿ ರೂಪಾಯಿ ನೆರವು.
* ಉತ್ತಮ ಪ್ಯಾಕೇಜುಗಳ ಮರುಪರಿಶೀಲನೆ
* ವಿಶೇಷ ಆರ್ಥಿಕ ವಲಯಗಳಿಗೆ ಧನಸಹಾಯ ಮುಂದುವರಿಕೆ.
* ವಿದೇಶಿ ಬಂಡವಾಳ ನೀತಿ ಸರಳೀಕರಣ ಯತ್ನ.
* 2010-11 ಸಾಲಿನಲ್ಲಿ ಶೇ.9 ಪ್ರಗತಿ ಗುರಿ
* ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಗೊಳಿಸಲು ಕ್ರಮ
* ಆಹಾರ ಭದ್ರತೆಗೆ ಹೆಚ್ಚಿನ ಒತ್ತು
* ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೂ ಬಲಪಡಿಸಬೇಕಾಗಿದೆ.
* ಜಿಡಿಪಿ ವೃದ್ಧಿಯಲ್ಲಿ ಸರಕಾರ ಯಶಸ್ವಿಯಾಗಿದೆ.
* ಆರ್ಥಿಕ ಹಿಂಜರಿತ ಎದುರಿಸುವಲ್ಲಿ ದೇಶ ಸಫಲ.
* ಹವಾಮಾನ ವೈಪರೀತ್ಯದಿಂದ ಉತ್ಪಾದನೆಯಲ್ಲಿ ಏರುಪೇರು.
* 2010ರಲ್ಲಿ ಕೃಷಿ ಉತ್ಪಾದನೆ ಸ್ಥಿರತೆ.
* ಬೆಲೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟು ಉಂಟಾಗಿತ್ತು.
* ಪ್ರಸಕ್ತ ಸಾಲಿನಲ್ಲಿ ರಫ್ತು ವ್ಯವಹಾರವೂ ಅತ್ಯುತ್ತಮವಾಗಿದೆ.
ಪ್ರತಿ ದಿನ 20 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
ರಫ್ತು ಉತ್ತೇಜನಕ್ಕೆ ಶೇ.2ರ ಸಹಾಯಧನ.
ಐದು ಬೃಹತ್ ಆಹಾರ ಪಾರ್ಕ್ ಸ್ಥಾಪನೆ.
* ಕೃಷಿ ವಲಯಕ್ಕೆ 3 ಲಕ್ಷ 75 ಸಾವಿರ ಕೋಟಿ ಸಾಲ
* ಆಹಾರ ಧಾನ್ಯಗಳ ಸಂಗ್ರಹಣೆಗೆ ಖಾಸಗಿ ಗೋದಾಮು ಪಡೆಯುವುದು.
* ರೈಲ್ವೇಗೆ 16 ಸಾವಿರ 772 ಕೋಟಿ ಅನುದಾನ
* ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ.
* ವಿದ್ಯುತ್ ಉತ್ಪಾದನಾ ವಲಯಕ್ಕೆ ಹಂಚಿಕೆ ಪ್ರಮಾಣ 5,130 ಕೋಟಿ ರೂ.ಗಳಿಗೆ ಏರಿಕೆ
* ಉತ್ತೇಜನಾ ಪ್ಯಾಕೇಜುಗಳ ಮರುಪರಿಶೀಲನೆ ಅಗತ್ಯ. ವಿಶಾಲ ಪ್ರಗತಿಯಾಧರಿತ ಕ್ಷೇತ್ರಕ್ಕೆ ಒತ್ತು ನೀಡುವ ಅಗತ್ಯ.
* ಗೋವಾ ಬೀಚುಗಳ ಹಸಿರೀಕರಣಕ್ಕೆ 200 ಕೋಟಿ ರೂಪಾಯಿ.
* 2010-11ರಲ್ಲಿ ಆರೋಗ್ಯ ಸಮೀಕ್ಷೆ.
* ನೆರೆ, ಬರ ಹೀಗೆ ಪ್ರಕೃತಿ ವಿಕೋಪ ಪೀಡಿತರ ಸಾಲ ಮರುಪಾವತಿ ಅವಧಿ ವಿಸ್ತರಣೆ.
* 2000 ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಸ್ಥಾಪನೆ.
* ಗಂಗಾ ನದಿ ನೀರು ಸ್ವಚ್ಛತೆಗೆ 500 ಕೋಟಿ.
* ಇಂದಿರಾ ವಸತಿ ಯೋಜನೆಗೆ 10,000 ಕೋಟಿ ರೂ.
* ಕೊಳೆಗೇರಿ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ
* ಡಾಲರ್ ಮತ್ತು ಯುರೋ ಮಾದರಿಯಲ್ಲಿ ಭಾರತೀಯ ರೂಪಾಯಿಗೆ ಚಿಹ್ನೆ ನೀಡಲು ಚಿಂತನೆ.
* ಈ ವರ್ಷ ಪ್ರಾಯೋಗಿಕವಾಗಿ ಗುರುತು ಚೀಟಿ ವಿತರಣೆ.
* ಅಲ್ಪಸಂಖ್ಯಾತರ ಅಭಿವೃದ್ದಿಗೆ 2,600 ಕೋಟಿ ರೂ.


Share: