ಹಾಸನ, ಡಿಸೆಂಬರ್ 17:ನಗರದಲ್ಲಿ ರೋಟರಿ ಜಿಲ್ಲಾ ೩೧೮೦ ರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸೊಬಗನ್ನು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ರೋಟರಿ ಜಿಲ್ಲೆ ೩೧೮೦ರ ವಿವಿಧ ವಲಯಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆದ ತಂಡಗಳಿಗೆ ಅಂತಿಮ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಹಾಸನ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ, ಅಯೋಜಿಸಲಾಗಿತ್ತು.
ಸ್ಪರ್ಧೆಯನ್ನು ರೋಟರಿ ಜಿಲ್ಲಾ ಗವರ್ನರ್ ಡಾ.ರವಿ ಅಪ್ಪಾಜಿ ಉದ್ಘಾಟಿಸಿ ರೋಟರಿ ಸದಸ್ಯರು ಮತ್ತು ಅವರ ಕುಟುಂಬದವರ ಕಲಾ ಪ್ರೌಢಿಮೆಯನ್ನು ಜಿಲ್ಲಾ ಮಟ್ಟದಲ್ಲಿ ತೋರಿಸುವ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಾಸನ ರೋಟರಿ ಹಾಗೂ ಸಮಿತಿಯ ಉಪಾಧ್ಯಕ್ಷ ಜೆ.ಎಸ್.ಮಂಜುನಾಥ್ ಅವರನ್ನು ಅಭಿನಂದಿಸಿ, ಕಲಾವಿದರಿಗೆ ನೀಡಿದ ಪ್ರೋತ್ಸಾಕ್ಕೆ ಹರ್ಷ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಸರ್ವಿಸ್ನ ನಿರ್ದೇಶಕ ಮಾಜಿ ಗೌವರ್ನರ್ ರೋ.ಎಂ.ಕೆ.ಜಿ.ಕುಮಾರ್ ಮಾತನಾಡಿ ಹಾಸನದಲ್ಲಿ ಸಾಂಸ್ಕೃತಿಕ ಸ್ಪರ್ಧೆಯು ಅತ್ಯಂತ ಸೂಕ್ತವಾಗಿದೆ ಎಂದು ಶ್ಲಾಘಿಸಿದರು. ಸಾಂಸ್ಕೃತಿಕಸ್ಪರ್ಧಾಸಮಿತಿಯ ಅಧ್ಯಕ್ಷ ನಂದಕುಮಾರ್ ಹಾಸನದಲ್ಲಿ ಈ ಸ್ಪರ್ಧೆಗೆ ಬಂದ ಎಲ್ಲಾ ರೋಟರಿ ಕಲಾವಿದರನ್ನು ಅಭಿನಂದಿಸಿದರು.
ಶ್ರೀಮತಿ ವಾಣಿ ನಾಗೇಂದ್ರ ಅವರು ಪ್ರಾರ್ಥಿಸಿದಿರು. ರೋಟರಿ ಉಪಾಧ್ಯಕ್ಷ ಪ್ರಭಾಕರಕ್ ಅವರು ಸ್ವಾಗತಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ರೋಟರಿ ಸಂಸ್ಥೆಗಳಿಂದ ಬಂದಿದ್ದ ಕಲಾವಿದರು ಸೊಗಸಾದ ಕಾರ್ಯಕ್ರಮಗಳನ್ನು ನಡೆಸಿ ತೋರಿಸಿದರು. ಮೊದಲನೆಯ ಸ್ಥಾನವನ್ನು ಕುಂದಾಪುರ, ಎರಡನೆಯ ಸ್ಥಾನವನ್ನು ಮಂಗಳೂರು ದಕ್ಷಿಣ ಮತ್ತು ಮೂರನೆ ಸ್ಥಾನವನ್ನು ಮೈಸೂರು ರೋಟರಿ ಕ್ಲಬ್ಗಳು ಪಡೆದುಕೊಂಡವು. ತೀರ್ಪುಗಾರರಾಗಿ ಪ್ರೊ.ನೀಲಕಂಠಪ್ಪ, ಶ್ರೀನರಹರಿ ಮತ್ತು ಶ್ರೀಮತಿ ಬನುಮಾ ಅವರು ಕರ್ತವ್ಯ ನಿರ್ವಹಿಸಿದರು. ಶ್ರೀಮತಿ ಪರಿಮಳ ಭಾರತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಜೆ.ಎನ್.ಮಂಜುನಾಥ್ ವಂದಿಸಿದರು.