ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಹಳೆಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನ ನೀಡುವುದು ಅಗತ್ಯ - ಅಶೋಕ್ ಹಾರ್ನಹಳ್ಳಿ

ಹಾಸನ: ಹಳೆಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನ ನೀಡುವುದು ಅಗತ್ಯ - ಅಶೋಕ್ ಹಾರ್ನಹಳ್ಳಿ

Fri, 18 Dec 2009 03:11:00  Office Staff   S.O. News Service
ಹಾಸನ, ಡಿಸೆಂಬರ್ 17: ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗಮಾಡಿ ಉನ್ನತ ಸ್ಥಾನ ಮಾನಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ತಾವು ಕಳೆದ ಸವಿನೆನಪುಗಳಷ್ಟೇ ಸಾಲದು. ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ ಯಾವ ರೀತಿಯ ಸಹಾಯ, ಮಾರ್ಗದರ್ಶನ ಮಾಡಬಹುದು ಎಂಬುದನ್ನು ಯೋಚಿಸುವ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಮತ್ತು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ ಅಶೋಕ್ ಹಾರ್‍ನಹಳ್ಳಿ ತಿಳಿಸಿದ್ದಾರೆ.
 
ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಹಳಲೆ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ನೆನಪಿನದೋಣಿ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ವಿದ್ಯಾಸಂಸ್ಥೆ ರಾಷ್ಟ್ರ ವ್ಯಾಪಿ ಹೆಸರುಗಳಿಸಿ ಸಹಸ್ರಾರು ತಂತ್ರಜ್ಞರನ್ನು ರೂಪಿಸಿದ ಹೆಮ್ಮೆಗೆ ಪಾತ್ರವಾಗಿದೆ. ಆದರೂ ಇಂದಿನ ದಿನಗಳಲ್ಲಿ ಈ ಸಂಸ್ಥೆ ಹೆಸರನ್ನು ಉಳಿಸಿಕೊಳ್ಳುವತ್ತ ನಾವು ವಿಚಾರಮಾqಬೆಕಿದೆ. ಉತ್ತಮ ಮಾರ್ಗದರ್ಶನ ನೀಡಿ, ಉತ್ತಮ ಮಾರ್ಗಸೂಚಿಸುವುದರ ಮೂಲಕ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಲಹೆ ನೀಡಿ ವಿದ್ಯಾಸಂಸ್ಥೆಯ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದರು ಕರೆ ನೀಡಿದರು. 
 
ಸುವರ್ಣ ಮಹೋತ್ಸವ ಆಚರಿಸುತ್ತಿರುವ ನೆನಪಿನಲ್ಲಿ ಈ ಸಂಸ್ಥೆ ಆವರಣದಲ್ಲಿ ಸಾವಿರ ಪ್ರೇಕ್ಷೆಣೆಗೆ ಆಸನವ್ಯ ವ್ಯವಸ್ಥೆಯಿರುವ  ಸುಂದರ ವಾದ ಸಭಾಂಗಣವನ್ನು ಏಳುಕೋಟಿ ರ‌ಊ ಅಂದಾಜಿನಲ್ಲಿ ನಿರ್ಮಿಸಲಾಗುವುದೆಂದು ಅಶೋಕ್ ಹಳೇ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು. 
 
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಡಿ.ಬಿ.ಬಸವೇಗೌಡ ವಿದ್ಯಾರ್ಥಿ ಜೀವನದಲ್ಲಾದ ಹಳೆಯ ನೆನಪುಗಳು ಪ್ರತಿಯೊಬ್ಬನ ನೆನಪಿನಲ್ಲಿ ಬಹುಕಾಲ ಉಳಿಯುತ್ತದೆ ಎಂದರು. ಹೊರತರಲಾದ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದ ಸಮಾರಂಭದಲ್ಲಿ ಪಾಲಗೊಂಡಿದ್ದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 
 
ಸಮಾರಂಭವನ್ನು ದ್ವೇಶಿಸಿ, ನ್ಯಾವಾದಿಗಳಾಗಿ ಸಂಸ್ಥೆಯ ಖಜಾಂಚಿ ಬಿ.ಎಸ್.ವೆಂಕಟೇಶ ಮೂರ್ತಿ ಮಾತನಾಡಿದರು. 
 
ಕಾಲೇಜಿನ ಹಳೇವಿದ್ಯಾರ್ಥಿ ಮತ್ತು ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎಂ.ಜಿ.ವೆಂಕಟೇಶ ಮೂರ್ತಿ ವಿದ್ಯಾರ್ಥಿ ಸಮೂಹದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿರುವುದನ್ನು ತಿಳಿಸಿದರಲ್ಲದೆ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಗೆ ನೆನಪಿನಲ್ಲಿ ಇರುವಂತ ಕಾರ್ಯಕ್ರಮಗಳತ್ತ ತಮ್ಮ ಒಲವು ತೋರಬೇಕೆಂದು ಮಲೆನಾಡು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸತ್ಯಾನಾರಾಯಣ ಸ್ವಾಗತಿಸಿ ವಿದ್ಯಾರ್ಥಿ ಸಂಘ ಈವರೆಗೆ ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದರು. 
 
ಹಳೇ ವಿದ್ಯಾರ್ಥಿಗಳಿಂದ ಕಾಂಚನರಾವ್, ಶ್ರೀನಿವಾಸ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಎಂ.ಪೌಂಡೇಶನ್ ವತಿಯಿಂದ ನೀಡಲಾಗುವ ವಿದ್ಯಾರ್ಥಿವೇತನವನ್ನು ಆಶೋಕ್ ಹಾರ್‍ನಹಳ್ಳಿ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಿದರು.ಅಲ್ಯೂಮ್ನಿ ಅಸೋಸಿಯೋಷನ್ ಕಾರ್ಯದರ್ಶಿ ಡಾ.ಕರಿಸಿದ್ದಪ್ಪ ಸಂಘದ ವರದಿಯನ್ನು ಮಂಡಿಸಿದರು. 


Share: