ಚಿಕ್ಕಬಳ್ಳಾಪುರ ಡಿಸೆಂಬರ್ ೦೩: ವಿಕಲಚೇತನರಿಗೆ ಅನುಕಂಪದ ಹಾಗು ಎಲ್ಲಾ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಿ ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಡಾ. ಮುಮ್ತಾಜ್ ಆಲಿ ಖಾನ್ ತಿಳಿಸಿದರು.ಚಿ
ಅವರು ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾSಗಳ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ಕ್ಯಾಂಪಸ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ವಿಕಲಚೇತನರಿಗೆ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಇಲಾಖೆಯ ಅಧಿಕಾರಿಗಳು ಅದನ್ನು ಅಂಗವಿಕಲರಿಗೆ ಸಕಾಲದಲ್ಲಿ ತಲುಪುವಂತೆ ಎಚ್ಚರಿಕೆ ವಹಿಸಬೇಕು. ಇಂತಹ ಸೌಲಭ್ಯಗಳನ್ನು ಅಂಗವಿಕಲರು ಎಷ್ಟರ ಮಟ್ಟಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನಾಮ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.
ಅನೇಕ ಗಣ್ಯ ವ್ಯಕ್ತಿಗಳು ದೇವಸ್ಥಾನ, ಚರ್ಚ್‌ಗಳಿಗೆ, ಮಸೀದಿಗಳಿಗೆ ಮತ್ತು ಇತರ ಮಂದಿರಗಳಿಗೆ ದಾನ ಮಾಡುವುದರಿಂದ ಸ್ವರ್ಗ ಸಿಗುತ್ತದೆ ಎಂಬ ಭಾವನೆ ಇದೆ ಇದೇ ರೀತಿಯ ಭಾವನೆಗಳನ್ನು ವಿಕಲಚೇತನರಿಗೆ ತೋರಿಸಿ ದಾನ ಮಾಡಿ ಅವರಲ್ಲಿ ಬದುಕುವ ಆತ್ಮವಿಶ್ವಾಸವನ್ನು ತುಂಬಿದಾಗ ಮಾತ್ರ ಅವರಿಗೆ ನೀಜವಾಗಿಯು ಪೂಣ್ಯ ಲಭಿಸುತ್ತದೆ ಎಂದರಲ್ಲದೆ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಅಂಗವಿಕಲರ ಭವನ್ನು ನಿರ್ಮಿಸಲಾಗುವುದು ಎಂದರು.
ಶಾಸಕ ಕೆ.ಪಿ.ಬಚ್ಚೇಗೌಡ ಕಾಯರ್ಕಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅಂಗವಿಕಲರಿಗೆ ಅನುಕಂಪಗಿಂತ ಹೆಚ್ಚಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಿ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ದೇಶದಲ್ಲಿ ವಿಕಲಚೇತನರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಜನರಲ್ಲಿ ಮೂಡಿಸಬೇಕೆಂದುತಿಳಿಸಿದರು.
ಪ್ರತಿ ಶುಕ್ರವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಗವಿಕಲರ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಲಾಗುತ್ತಿದೆ ಇದರ ಜೊತೆಗೆ ಪ್ರತಿ ತಿಂಗಳಿಗೊಮ್ಮೆ ವೈದ್ಯರು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಅಂಗವಿಕಲರಿಗೆ ಪ್ರಮಾಣ ಪತ್ರ ನೀಡಬೇಕು ಇದರಿಂದ ಅಂಗವಿಕಲರಿಗೆ ದೂರದ ತಾಲ್ಲೂಕುಗಳಿಂದ ಜಿಲ್ಲೆಗೆ ಪ್ರಯಾಣ ಮಾಡುವುದನ್ನು ತಪ್ಪಿಸಿದಂತಾಗುತ್ತದೆ ಎಂದರು. ಒಂದು ವೇಳೆ ಶುಕ್ರವಾರದಂದು ರಜೆ ಇದ್ದರೆ ಮುಂಚಿತವಾಗಿ ತಿಳಿಸಿ ಗುರುವಾರದಂದೆ ತಪಾಸಣೆಯನ್ನು ನಡೆಸಬೇಕೆಂದರು.
ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಗೆ ಜವಬ್ದಾರಿಗಳಾಗಿರುತ್ತಾರೆ. ಅಂಗವಿಕಲರು ತಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಿದರೆ ಅವರ ಮೇಲೆ ಸೂಕ್ತ ಕ್ರಮಕೈಗೊಳುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅಂವಿಕಲರಿಗಾಗಿ ನಿರ್ಮಿಸಲಾಗುವ ವಿಕಲಚೇತನರ ಭವನಕ್ಕೆ ನನ್ನ ಸಹಾಕಾರವಿದೆ ಮತ್ತು ಶಾಸಕರ ಅನುದಾನದಿಂದ ಹಣವನ್ನು ನೀಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷಿಣಿ ಶ್ರೀಮತಿ ವಿನುತ ಶ್ರೀನಿವಾಸ್ ಮಾತನಾಡಿ ಅವರಿಗೆ ಎಲ್ಲಾ ರಂಗದಲ್ಲಿಯು ದುಡಿಯಲು ಅವಕಾಶವನ್ನು ಕಲ್ಪಿಸಿಕೊಡಬೇಕೆಂದರು.
ವಿಕಲಚೇತನರ ಶೇ.೩ ರಷ್ಟು ಮೀಸಲಾತಿಯನ್ನು ಕೇವಲ ಉದ್ಯೋಗ, ಶಿಕ್ಷಣಕ್ಕೆ ಮೀಸಲಾಗದೆ ರಾಜಕೀಯದಲ್ಲಿ ಹಾಗೂ ಇತರೆ ರಂಗದಲ್ಲಿಯೂ ಮೀಸಲಾತಿಯನ್ನು ನೀಡಬೇಕೆಂದರು
ಜಿಲ್ಲಾಧಿಕಾರಿ ಅನ್ವರ್ ಪಾಷ ಮಾತನಾಡಿ ಅಧಿಕಾರಿಗಳು ಅಂಗವಿಕಲರ ನೋವುಗಳಿಗೆ ಸರಿಯಾಗಿ ಸ್ಪಂದಿಸಲು ಕ್ರಮಕೈಗೊಳ್ಳಲಾಗುತ್ತದೆ. ಸರ್ಕಾರದಿಂದ ಬರುತ್ತಿರುವ ಸೌಲಭ್ಯಗಳು ಅವರ ಕೈ ಸೇರುವಂತೆ ಮಾಡಲಾಗುತ್ತದೆ ಎಂದರಲ್ಲದೆ ವಿಕಲಚೇತನರ ಭವನಕ್ಕಾಗಿ ಅದಷ್ಟು ಬೇಗ ಸರಿಯಾದ ನಿವೇಶಣವನ್ನು ಗುರುತಿಸಿ ಅದರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ವೀಲ್ ಚೆರ್‌ಗಳು ಮತ್ತು ಸಾಧನ ಸಲಕರಣೆಗಳನ್ನು ವಿತರಿಸಿದರು.
ಸಮಾರಂಭಧಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಚೆಂಡೂರು ವಿ.ವೆಂಕಟೇಶ್, ಜಿ.ಪಂ. ಮುಖ್ಯಕಾರ್ಯನಿರ್ವಣಾಧಿಕಾರಿ ಎನ್.ಕೃಷ್ಣಪ್ಪ, ಜಿ.ಪಂ.ಸದಸ್ಯರಾದ ರವಿಕುಮಾರ್, ಎಸ್.ಮಹಮದ್ ಷಫೀ ಉಪಸ್ಥಿತರಿದ್ದರು.
ಪೋಟೋ ವಿವರ
ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ವಿ.ಕ್ಯಾಂಪಸ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಡಾ. ಮುಮ್ತಾಜ್ ಆಲಿ ಖಾನ್ ಉದ್ಘಾಟಿಸಿದರು. ಶಾಸಕ ಕೆ.ಪಿ.ಬಚ್ಚೇಗೌಡ, ಜಿ.ಪಂ ಅಧ್ಯಕ್ಷಿಣಿ ಶ್ರೀಮತಿ ವಿನುತ ಶ್ರೀನಿವಾಸ್, ಜಿ.ಪಂ ಉಪಾಧ್ಯಕ್ಷ ಚೆಂಡೂರು ವಿ.ವೆಂಕಟೇಶ್, ಜಿ.ಪಂ. ಮುಖ್ಯಕಾರ್ಯನಿರ್ವಣಾಧಿಕಾರಿ ಎನ್.ಕೃಷ್ಣಪ್ಪ ಚಿತ್ರದಲ್ಲಿದ್ದಾರೆ.