ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ತುಮಕೂರು ಬಳಿ ಭೀಕರ ರಸ್ತೆ ಅಪಘಾತ

ತುಮಕೂರು ಬಳಿ ಭೀಕರ ರಸ್ತೆ ಅಪಘಾತ

Mon, 26 Apr 2010 15:39:00  Office Staff   S.O. News Service
ತುಮಕೂರು, ಏ. 26 : ತುಮಕೂರು ಜಿಲ್ಲೆಯ ಅಂಚೆಕೊಪ್ಪಲ್ ಗ್ರಾಮದಲ್ಲಿ ಕಾರು ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ಸಿನ ನಡುವೆ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತರಾಗಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ನಾಲ್ವರನ್ನು ತುಮಕೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ತುಮಕೂರಿನಲ್ಲಿ ಜರುಗಿದ ಎರಡನೇ ಭೀಕರ ರಸ್ತೆ ಅಪಘಾತ ಇದಾಗಿದೆ. ಭಾನುವಾರ ಟೆಂಪೋ ಮತ್ತು ಕೆಎಸ್ಆರ್ ಟಿಸಿ ಬಸ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಆರು ಜನ ದುರ್ಮರಣಕ್ಕೀಡಾಗಿ ಐವರು ಗಾಯಗೊಂಡಿದ್ದರು.

Share: