ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ತಿಳಿಸಲು ಮನವಿ

ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ತಿಳಿಸಲು ಮನವಿ

Sat, 24 Apr 2010 12:51:00  Office Staff   S.O. News Service

ಚಾಮರಾಜನಗರ, ಏ.೨೪,ಗ್ರಾಮ ಪಂಚಾಯಾತ್ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಮತ್ತು ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಮಾಹಿತಿಯನ್ನು ಸ್ವೀಕರಿಸಲು ಅಬಕಾರಿ ಇಲಾಖೆಯಿಂದ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ.
   ಚುನಾವಣೆ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ನಕಲಿ ಮದ್ಯವನ್ನು ವಿತರಣೆ ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು  ಎಚ್ಚರಿಕೆಯಿಂದ ಇರಬೇಕಾಗಿದೆ, ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಚಟುಚಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು. ಅಕ್ರಮ ಮದ್ಯ ತಯಾರಿಕೆ, ಅಕ್ರಮ ಮದ್ಯ ದಾಸ್ತಾನು, ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಅಬಕಾರಿ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಕರೆ ಮಾಡಬಹುದಾಗಿದೆ.
     ನಿಯಂತ್ರಣ ಕೊಠಡಿ ಮತ್ತು ದೂರವಾಣಿ ಹಾಗೂ ಸಂಚಾರಿ ದೂರವಾಣಿ ಸಂಖ್ಯೆ ಇಂತಿದೆ: ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ(ದೂ.ಸಂಖ್ಯೆ. ೦೮೨೨೬-೨೨೪೭೭೬, ೨೨೫೬೯೮, ೯೪೪೯೫೯೭೧೭೯, ೯೯೧೬೧೫೬೧೫೫, ೯೨೪೨೪೭೦೫೯೨, ೯೪೪೯೦೪೯೩೪೭),
    ಚಾಮರಾಜನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಮತ್ತು ಚಾಮರಾಜನಗರ ವಲಯದ ಅಬಕಾರಿ ನಿರೀಕ್ಷಕರ ಕಚೇರಿ(ದೂ.ಸಂ.೦೮೨೨೬-೨೨೪೮೯೨, ೨೨೩೮೨೧, ೯೪೪೯೫೯೭೧೮೬, ೯೪೪೯೫೯೭೧೮೭, ೯೮೪೫೫೪೬೭೦೨, ೯೮೪೫೫೮೫೬೨೧, ೯೮೪೫೭೯೮೧೨೨, ೮೦೫೦೨೭೩೪೯೦),  ಗುಂಡ್ಲುಪೇಟೆ ವಲಯ ಅಬಕಾರಿ ನಿರೀಕ್ಷಕರ ಕಚೇರಿ(೦೮೨೨೯-೨೨೩೨೮೯, ೯೬೮೬೫೯೪೬೮೯, ೯೯೬೪೩೬೪೭೭೦) ಮತ್ತು ಕೊಳ್ಳೇಗಾಲ ವಲಯ ಅಬಕಾರಿ ನಿರೀಕ್ಷಕರ ಕಚೇರಿ(೦೮೨೨೪-೨೫೨೪೩೩, ೯೯೦೧೯೨೫೦೮೧, ೯೮೪೫೮೧೧೧೭೦) ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಮಾದಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


Share: