ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ವಿಧಾನ ಪರಿಷತ್ ಚುನಾವಣೆ - ಮತವೊಂದಕ್ಕೆ ಐದು ಸಾವಿರ ಬೆಲೆ

ಭಟ್ಕಳ: ವಿಧಾನ ಪರಿಷತ್ ಚುನಾವಣೆ - ಮತವೊಂದಕ್ಕೆ ಐದು ಸಾವಿರ ಬೆಲೆ

Thu, 17 Dec 2009 18:18:00  Office Staff   S.O. News Service
ಭಟ್ಕಳ, ಡಿಸೆಂಬರ್ 17: ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಓರ್ವ ಪಕ್ಷೇತರ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಹಣ ಹೆಂಡವೆ ನಿರ್ಣಯಕ ಪಾತ್ರವಹಿಸಲಿದ್ದು ಓರ್ವ ಮತದಾರನಿಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗೈ ತಲಾ 5,000 ನಗದು ರೂ ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಇಲ್ಲಿನ ಪಂಚಾಯತ್ ಸದಸ್ಯರೆ ಪತ್ರಿಕೆಗೆ ಮಾಹಿತಿಯನ್ನು ರವಾನಿಸಿದ್ದಾರೆ. 
 
ಭಟ್ಕಳ ತಾಲೂಕಿನಲ್ಲಿ ಕಾಂಗೈ ಹಾಗೂ ಬಿಜೆಪಿಗಳಲ್ಲಿನ ಒಳ ಜಗಳ ಕಿತ್ತಾಟಗಳಿಂದ ಪಕ್ಷೇತರ ಅಭ್ಯರ್ಥಿ ಅನಿಲಕುಮಾರ ಲಾಭ ಪಡೆಯಲಿದ್ದಾರೆ ಎಂದು ರಾಜಕೀಯ ಮೂಲಕಗಳು ವಿಶ್ಲೇಷಿಸುತ್ತಿವೆ ಅದು ಅಲ್ಲದೆ ಭಟ್ಕಳದ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹ ಈ ಬಾರಿ ತನ್ನ ಬೆಂಬಲವನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿದ್ದು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡುವಂತೆ ಮಾಡಿದೆ. ಬಿಜಿಪಿಯಲ್ಲಿ ಬಣಗಳಿಂದಬಣಗಳಾಗಿ ಈಗ ಪಕ್ಷ ಛಿದ್ರವಿಛಿದ್ರವಾಗಿ ಹೋಗಿದ್ದು ಇಲ್ಲಿ ಹಿಂದು ಸೌಮ್ಯವಾದಿಗಳು ಒಂದೆಡೆಯಾದರೆ ಕಟ್ಟರ್ ಸಂಘಪರಿವಾರದವರದು ಇನ್ನೊಂದು ಗುಂಪು ಆಗಿ ಅದರಲ್ಲಿ ಮರಿಪುಡಾರಿಗಳ ಮತ್ತೊಂದು ಗುಂಪು ಇತ್ತಿಚಿಗೆ ಟಿಸಿಲೊಡೆದು ಪಕ್ಷದಲ್ಲಿ ಯಾವುದೂ ಕೂಡ ಸರಿಯಾಗಿಲ್ಲ ಎಂಬುದು ತೋರಿಸಿಕೊಟ್ಟಿದೆ.
 
ಕಾಂಗೈನಲ್ಲಿ ಪರಸ್ಪರ ಕಚ್ಚಾಟ ಎರಚಾಟಗಳು ನಡೆದಿದ್ದು ಮೇಲ್ನೋಟಕ್ಕೆ ವರಿಷ್ಠರ ಮುಂದೆ ತಾವು ಒಟ್ಟಾಗಿದ್ದೇವೆ ಎಂದು ತೋರ್ಪಡಿಸಿಕೊಂಡರೂ ಅವರ ಮುಖಗಳು ಒಂದೆ ವೇದಿಕೆಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿರುವುದು ಜನಸಾಮಾನ್ಯರಿಗೆ ಅರ್ಥವಾಗದೆ ಇರದು. ರಾಜ್ಯ ಪ್ರಾದೇಶಿಕ ಕಾಂಗೈ ಅಧ್ಯಕ್ಷ ದೇಶಪಾಂಡೆಯವರು ಏನೆ ಹೇಳಿದರು ಅದು ಅವರ ಸಮಧಾನಕ್ಕಾಗಿ ಮಾತ್ರ ಆಗಿದ್ದು ಇಲ್ಲಿ ಜೆ.ಡಿ.ಎಸ್. ಮೈತ್ರಿ ಇಲ್ಲಕ್ಕೆ ಸಮಾ ಎನ್ನಬಹುದು. ಏಕೆಂದರೆ ಹಳಿಯಾಳದ ಜೆ.ಡಿ.ಎಸ್. ಮುಖಂಡರು ನೀವು ಏನೆ ಹೇಳಿಕೊಂಡು ತಿರುಗಿ ನಾವು ಮಾತ್ರ ಕಾಂಗೈಗೆ ಓಟು ಹಾಕಲ್ಲ ಎನ್ನುತ್ತಿದ್ದಾರೆ. ಈ ಎಲ್ಲ ಸಂದಿಗ್ಧ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗೈ ತನ್ನ ಹಸ್ತವನ್ನು ಚಾಚುವುದು ಕಷ್ಟ ಎಂದೆ ಹೇಳುತ್ತಿವೆ ರಾಜಕೀಯ ಲೆಕ್ಕಚಾರಗಳು ಯುವ ಉತ್ಸಾಹಿ ಅನಿಲ್ ಕುಮಾರ್ ರಾಜಕೀಯದ ಮೂಲಕ ಸಮಾಜ ಸೇವೆಯನ್ನು ಮಾಡುವುದಾಗಿ ಹೇಳಿಕೊಳ್ಳುತ್ತಿದ್ದು ತನಗೆ ಬಿಜೆಪಿ,ಕಾಂಗೈ ಮತ್ತು ಜೆ.ಡಿ.ಎಸ್. ಮತದಾರರ ಒಲವು ಇದೆ ಅಲ್ಲದೆ ತಾವು ಕ್ಷೇತ್ರ ಪ್ರದಕ್ಷಿಣೆ ಮಾಡಿದಾಗ ತಮಗೆ ಅಪೂರ್ವ ಜನ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ ಒಟ್ಟಿನಲ್ಲಿ ಈ ಬಾರಿ ಜಿಲ್ಲೆಯ ಮತದಾರರ ಮಾತ್ರ ತನ್ನ ಗುಟ್ಟು ಬಿಟ್ಟುಕೊಡುತ್ತಿಲ್ಲ ಕಾಂಗ್ರೇಸಿಗರು ಕೊನೆಗಳಿಗೆಯಲ್ಲಿ ಎತ್ತಕಡೆ ವಾಲುವರೂ ದೇವರೆ ಬಲ್ಲ. 

ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ



Share: