ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಂಡಗೋಡು ಸಮರ್ಥ ನಾಗರಾಜ ಅರ್ಕಸಾಲಿ ಗೆ ಮುಖ್ಯಮಂತ್ರಿಗಳಿಂದ ಬಹುಮಾನ

ಮುಂಡಗೋಡು ಸಮರ್ಥ ನಾಗರಾಜ ಅರ್ಕಸಾಲಿ ಗೆ ಮುಖ್ಯಮಂತ್ರಿಗಳಿಂದ ಬಹುಮಾನ

Thu, 03 Oct 2024 07:04:12  Office Staff   S O News

ಕಾರವಾರ: ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ  ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ, ಮುಂಡಗೋಡ ತಾಲೂಕು ಹುನಗುಂದದ ಸರ್ಕಾರಿ ಪ್ರೌಢಶಾಲೆಯ ಸಮರ್ಥ ನಾಗರಾಜ ಅರ್ಕಸಾಲಿ, ಅವರಿಗೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಮಾನ ವಿತರಿಸಿದರು.

ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯ ಸುಲೋಚನ ಸಭಾಂಗಣದಲ್ಲಿ  ಬುಧವಾರ ನಡೆದ  ಸಮಾರಂಭದಲ್ಲಿ  ರೂ.,21,000 ರೂ  ರೂ.ನಗದು ಪುರಸ್ಕಾರ ಹಾಗೂ ಪ್ರಮಾಣಪತ್ರವನ್ನು  ಮುಖ್ಯಮಂತ್ರಿಗಳು ವಿತರಿಸಿದರು.


Share: