ಮಂಗಳೂರು, ಅ. ೨೪: ಮಂಗಳೂರು ವಿಮಾನ ನಿಲ್ದಾಣದಿಂದ ಜೆಡ್ಡಾಕ್ಕೆ ನೇರ ವಿಮಾನ ಸೌಕರ್ಯ ಅ. ೨೫ರಂದು ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ, ಸೌಕರ್ಯ ಕಲ್ಪಿಸುವ ಪ್ರಥಮ ಹಜ್ ಶಿಬಿರವನ್ನು ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಡಾ| ಮುಮ್ತಾಜ್ ಅಲಿ ಖಾನ್ ಅವರು ಶನಿವಾರ ಮಧ್ಯಾಹ್ನ ಉದ್ಘಾಟಿಸಿದರು.
ಹಜ್ ಯಾತ್ರಾರ್ಥಿಗಳು ವೈಯಕ್ತಿಕವಾಗಿ ಉತ್ತಮ ಪರಿವರ್ತನೆ ಕಾಣುವ ಮೂಲಕ ಧನ್ಯ ತೆ ಪಡೆಯಬೇಕು ಎಂದು ಅವರು ಹಾರೈಸಿದರು.
ಹಜ್ ಯಾತ್ರಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಪುಣ್ಯ ಗಳಿಸುವ ಉದ್ದೇಶದಿಂದ ಕೈ ಗೊಳ್ಳುವ ಈ ಯಾತ್ರೆಯ ಸೌಭಾಗ್ಯ ಪಡೆದ ಪ್ರತಿಯೋರ್ವರೂ ಹೆಚ್ಚು ಪ್ರಾಮಾಣಿಕತೆ ಹಾಗೂ ಅಂತರಂಗ ಶುದ್ಧಿ ಕಾಯ್ದುಕೊಳ್ಳುವ ಮೂಲಕ ಈ ಯಾತ್ರೆಯ ಪಾವಿತ್ರ್ಯ ಹೆಚ್ಚಿಸ ಬೇಕೆಂದರು.
ಹಜ್‌ಗೆ ತೆರಳುವವರ ಪೈಕಿ ಶೇ. ೫೦ ಕ್ಕಿಂತಲೂ ಹೆಚ್ಚು ಮಹಿಳೆಯರು ಇರುವ ಹಿನ್ನೆ ಲೆಯಲ್ಲಿ ಹಜ್ ಸಮಿತಿಯಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಲಾಗಿದೆ ಎಂದರು.
ರಾಜ್ಯ ಹಜ್ ಸಮಿತಿ ಅಧ್ಯಕ್ಷ ಎಸ್. ಮುಹಮ್ಮದ್ ಗೌಸ್ ಅಧ್ಯಕ್ಷತೆ ವಹಿಸಿದ್ದರು. ಮಂಗ ಳೂರು ಖಾಝಿ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್ ಚೆಂಬರಿಕ ದುವಾ (ಪ್ರಾರ್ಥನೆ) ನೆರವೇರಿ ಸಿದರು.
ಸಹಾಯಕ ಖಾಝಿ ತ್ವಾಕಾ ಅಹಮ್ಮದ್ ಮುಸ್ಲಿಯಾರ್, ಮಂಗಳೂರು ಶಿಬಿರದ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ಶಾಸಕ ಯು.ಟಿ. ಖಾದರ್, ರಾಜ್ಯ ಹಜ್ ಸಮಿತಿಯ ಕಾರ್‍ಯ ನಿರ್ವಾಹಕ ಅಧಿಕಾರಿ ನಿಯಾಜ್ ಅಹ್ಮದ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಎಂ. ಮಸೂದ್, ಮಾಜಿ ಸಚಿವ ಬಿ.ಎ. ಮೊದಿನ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಕೆ. ಮೋನು, ಹಜ್ ಶಿಬಿರ ಸಮಿತಿಯ ಉಪಾಧ್ಯಕ್ಷ ಬಿ.ಎ. ಮೊದಿನ್ ಬಾವ ಮತ್ತು ಅಜೀಜ್ ಬೈಕಂಪಾಡಿ, ಮುಖಂಡರಾದ ತುಂಬೆ ಬಿ.ಎ. ಮೊಯಿದ್ದೀನ್, ವೈ. ಅಬ್ದುಲ್ಲ ಕುಂಞಿ, ಜಿ.ಎ. ಬಾವಾ, ಟಿ.ಎ. ಶಹೀದ್, ವಿ. ಮುಹಮ್ಮದ್, ಅಬೂಬಕ್ಕರ್ ನಾಟೆಕಲ್, ಅಜೀಝ್ ಪರ್ತಿಪಾಡಿ, ರಹೀಂ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.
ಸಕಲ ಸಿದ್ಧತೆ
ಬಜಪೆ ಅನ್ಸಾರ್ ಶಾಲಾ ಮೈದಾನದಲ್ಲಿ ಏರ್ಪಡಿಸಲಾದ ಹಜ್ ಶಿಬಿರದಲ್ಲಿ ವಿದೇಶಿ ವಿನಿ ಮಯ ವ್ಯವಸ್ಥೆ ಸಹಿತ ಯಾತ್ರಾರ್ಥಿಗಳಿಗಾಗಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ನವೀನ್ ಚಂದ್ರ ಹಾಗೂ ಡಾ| ರೇಣುಕಾ ಅವರು ಎಚ್೧ಎನ್೧ ಸ್ಕ್ರೀನಿಂಗ್ ಟೆಸ್ಟ್‌ನ ಜವಾಬ್ದಾರಿ ವಹಿಸಿಕೊಂಡರೆ, ಯೇನಪೋಯ ವೈದ್ಯಕೀಯ ಕಾಲೇಜಿನ ವೈದ್ಯರ ತಂಡ ಇತರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿ ವೆ. ಯಾತ್ರಿಗಳಿಗೆ ಪ್ರತ್ಯೇಕ ವಾಸ್ತವ್ಯ ಹಾಗೂ ಪ್ರಾರ್ಥನಾ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾತ್ರಾರ್ಥಿಗಳಿಗೆ ಉಚಿತ ಊಟ, ಉಪಹಾರ ಮತ್ತು ಶಿಬಿರದ ಪ್ರದೇಶದಿಂದ ವಿಮಾನ ನಿಲ್ದಾಣವರೆಗಿನ ಬಸ್ ವ್ಯವಸ್ಥೆಯನ್ನು ಉಳ್ಳಾಲ ದರ್ಗಾ ಸಮಿತಿ ಒದಗಿಸಿದೆ.