ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮನೆಯಲ್ಲಿದ್ದ ಪೀಠೋಪಕರಣ ದ್ವಂಸಗೊಳಿಸಿ ಒಂದು ಲಕ್ಷ ರೂ ದೋಚಿಕೊಂಡು ಹೋದ ಕಳ್ಳರು

ಮನೆಯಲ್ಲಿದ್ದ ಪೀಠೋಪಕರಣ ದ್ವಂಸಗೊಳಿಸಿ ಒಂದು ಲಕ್ಷ ರೂ ದೋಚಿಕೊಂಡು ಹೋದ ಕಳ್ಳರು

Mon, 01 Jan 2024 00:20:16  Office Staff   SOnews

ಭಟ್ಕಳ:  ಭಟ್ಕಳದ ನಾಗಪ್ಪ ನಾಯ್ಕ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಘಟನೆ ರವಿವಾರ ವರದಿಯಾಗಿದೆ. ಕಳ್ಳರು ಮನೆಯ ಲಕ್ಷಾಂತರ ರೂ ಬೆಲೆಬಾಳುವ ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದು ರೂ ೧ಲಕ್ಷ ನಗದು ದೂಚಿಕೊಂಡು ಪರಾರಿಯಾಗಿದ್ದಾರೆ ಎಂದು ನಗರಠಾಣೆಯಲ್ಲಿ ದೂರು ದಾಖಲಾಗಿದೆ.

ಬದ್ರುದುಜಾ ಬರ್ಮಾವರ್ ಎಂಬುವವರಿಗೆ ಸೇರಿದ ಮನೆಯಲ್ಲಿ ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದ ಒಳಗೆ  ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳತನ ನಡೆದಿದೆ ಎಂದು ಹೇಳಲಾಗಿದೆ.

ಮನೆಯ ಯಜಮಾನರ ಪ್ರಕಾರ, ಮಗಳ ಹೆರಿಗೆ ನಿಮಿತ್ತ ಮಗಳ ಮನೆಗೆ ತೆರಳಿದ ಅವರು, ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮನೆಗೆ ವಾಪಸ್ಸಾಗುವ ವೇಳೆ ಪ್ರವೇಶ ದ್ವಾರದ ಬಾಗಿಲು ಮುರಿದಿತ್ತು. ಮಲಗುವ ಕೋಣೆಗಳು ಸಹ ಮುರಿದುಹೋಗಿವೆ, ಮಲಗುವ ಕೋಣೆಯಲ್ಲಿನ ಕಪಾಟುಗಳನ್ನು ಸಹ ಲಾಕ್ ಮಾಡಲಾಗಿದೆ, ಅವುಗಳು ಸಹ ಮುರಿದು ತೆರೆದಿವೆ. ಕೆಳ ಮಹಡಿಯಲ್ಲಿದ್ದ ಎರಡು ಬೆಡ್ ರೂಂ ಜೊತೆಗೆ ಮೊದಲ ಮಹಡಿಯಲ್ಲಿರುವ ಮೂರು ಬೆಡ್ ರೂಮ್ ಗೂ ಕಳ್ಳರು ಆಗಮಿಸಿ ಸಂಪೂರ್ಣ ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದಾರೆ. ಮನೆಯಲ್ಲಿ ಯಾವುದೇ ಚಿನ್ನಾಭರಣ ದೊರೆಯದೆ ಇದ್ದುದರಿಂದಾಗಿ ಈ ವಿದ್ವಂಸಕ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕಳ್ಳರು ಮುಂಬಾಗಿಲು ಮುರಿದು ನಗದು ಹಣದೊಂದಿಗೆ ಹಿಂಬಾಗಿಲಿನಿಂದ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕಳ್ಳರ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ದೂರು ದಾಖಲಿಸಿಕೊಂಡಿರುವ  ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share: