ಬೆಂಗಳೂರು, ಜ. 2: ವಿವಾದಿತ ಕಾರವಾರ ಹಣಕೋಣ ಉಷ್ಣ ವಿದ್ಯುತ್ ಸ್ಥಾವರವನ್ನು ತಮಿಳುನಾಡಿನ ಟ್ಯುಟಿಕೋರಿನ್ಗೆ ಸ್ಥಳಾಂತರಿಸಲು ಹಿಂದ್ ಭಾರತ್ ಕಂಪೆನಿ ಮುಂದಾಗಿದೆ.
ಶನಿವಾರ ಸಂಜೆ ವೇಳೆಗೆ ಯೋಜನೆ ಸ್ಥಳಾಂತರ ಮಾಡುವ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು ಎಂದು ಕಂಪೆನಿಯ ಹಿರಿಯ ಅಧಿಕಾರಿ ವಾಸುರಾವ್ ಮತ್ತು ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಡಿ.ನಾಯಕ್ ಜಂಟಿ ತಿಳಿಸಿದ್ದಾರೆ.
ಕಾರವಾರ ಜಿಲ್ಲೆಯ ಹಣಕೋಣ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪರಿಸರವಾದಿಗಳು ಹಾಗೂ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಯೋಜನೆಯ ವಿರುದ್ಧ ಚಳವಳಿ ರೂಪಿಸಿತ್ತು. ಹೋರಾಟಕ್ಕೆ ಮಣಿದಿರುವ ಕಂಪೆನಿ ಯೋಜನೆಯನ್ನು ರಾಜ್ಯದಲ್ಲಿ ಕೈಬಿಡಲು ನಿರ್ಧರಿಸಿದೆ.
ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಬದಲಿಗೆ ಪರಿಸರ ಪೂರಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕಂಪೆನಿಯ ನಿರ್ಣಯಿಸಲಾಗಿದೆ. ಸುಸಜ್ಜಿತ ಹೊಟೇಲ್, ಹೆಲ್ತ್ ರೆಸಾರ್ಟ್ ಹಾಗೂ ವೈದ್ಯಕೀಯ ಕಾಲೇಜು ತೆರೆಯಲು ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದು ಕಂಪೆನಿಯ ವಾಸುರಾವ್ ಮಾಹಿತಿ ನೀಡಿದರು.
ಪರಿಸರ ಮತ್ತು ಜನತೆಗೆ ಮಾರಕವಾಗಿದ್ದ ಯೋಜನೆ ವಿರೋಧಿ ಹೋರಾಟಕ್ಕೆ ಮಠಾಧೀಶರೂ ಸೇರಿದಂತೆ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದ್ದರು. ಜನರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಡಿ.ನಾಯಕ್ ನುಡಿದರು.