ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ವಿಧಾನ ಪರಿಷತ್ ಚುನಾವಣೆ-ಜೆಡಿಎಸ್ ಮುಖಂಡರಿಂದ ಮತಯಾಚನೆ

ಹಾಸನ: ವಿಧಾನ ಪರಿಷತ್ ಚುನಾವಣೆ-ಜೆಡಿಎಸ್ ಮುಖಂಡರಿಂದ ಮತಯಾಚನೆ

Mon, 14 Dec 2009 03:14:00  Office Staff   S.O. News Service
ಹಾಸನ, ಡಿ.12- ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ  ಜೆಡಿ‌ಎಸ್ ಮುಖಂಡರು ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ   ಜನಪ್ರತಿನಿಧಿಗಳ ಸಭೆ ನಡೆಸಿ ಮತಯಾಚನೆ ಮಾಡಿದರು.
 
ಚನ್ನರಾಯಪಟ್ಟಣದ ಕಸಬಾ ಹೋಬಳಿ ಸ್ಥಳಿಯ ಜನಪ್ರತಿನಿಧಿಗಳ ಸಭೆಯನ್ನು ಪಟ್ಟಣದ ಹೊರ ವಲಯದಲ್ಲಿ ಆಯೋಜಿಸಲಾಗಿತ್ತು.
 
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟೇಗೌಡ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದಬ್ಬಾಳಿಕೆಗೆ ಕಡಿವಾಣ ಹಾಕುವ ಸಲುವಾಗಿ ಕಾಂಗ್ರೆಸ್-ಜೆಡಿ‌ಎಸ್ ಮೈತ್ರಿಯೊಂದಿಗೆ ಬಿಜೆಪಿಯನ್ನು ಎದುರಿಸುತ್ತಿದ್ದು, ಲೋಕಕ್ಕೆ ಕಂಟಕವಾಗಿರುವ ಬಿಜೆಪಿಯನ್ನು ಸೋಲಿಸದ ಹೊರತು ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿಲ್ಲ ಎಂದರು.
 
ಜೆಡಿ‌ಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಜೆಡಿ‌ಎಸ್‌ಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು.
ಅಭ್ಯರ್ಥಿ ಪಟೇಲ್ ಶಿವರಾಂ ಮಾತನಾಡಿ, ಬಿಜೆಪಿಯ ಸರ್ಕಾರದ ವಿರುದ್ಧ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದು, ತಮ್ಮ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.
 
ಕಾಂಗ್ರೆಸ್‌ನ ಮಾಜಿ ಶಾಸಕ ಡಾ.ಎನ್.ಬಿ.ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಉಪಾಧ್ಯಕ್ಷ ಎ.ಇ.ಚಂದ್ರಶೇಖರ್, ಸದಸ್ಯ ಎಂ.ಕೆ.ಮಂಜೇಗೌಡ, ಮಾಜಿ ಸದಸ್ಯ ಪರಮದೇವರಾಜೇಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವಿ.ಎನ್.ಮಂಜುನಾಥ್, ಅನಿಲ್‌ಮರಗೂರು ಇತರರು ಉಪಸ್ಥಿತರಿದ್ದರು.


Share: