ಮಂಗಳೂರು,ಡಿ.23: ದ.ಕ.ಜಿಲ್ಲಾ ಮಂಗಳೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಅಮಿತ್ ಸಿಂಗ್ ಅವರ ನಿರ್ದೇಶನದಂತೆ ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷರಾದ ವಿನಯ್ .ಎ.ಗಾಂವಕರ್ ನೇತ್ರತ್ವದಲ್ಲಿ , ಶ್ರೀಮಂತ ವ್ಯಕ್ತಿಗಳಿಗೆ ಅಂತರ್ ರಾಜ್ಯ ಕರೆಗಳ ಮೂಲಕ ಬೆದರಿಸಿ ಹಫ್ತಾ ವಸೂಲಿಗೆ ಪ್ರಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಅಂಗಸಂಸ್ಥೆ ಸಮರ ಸೇನೆ ಜಿಲ್ಲಾಧ್ಯಕ್ಷ ಜಯಾನಂದ ಗಾಣಿಗ , ಕಾರ್ಯದರ್ಶಿ ಚಂದ್ರಹಾಸ್, ಕಾರ್ಯಕರ್ತ ಅಬ್ದುಲ್ ಲತೀಫ್ ಎಂಬ ಮುವರು ಭೂಗತ ಪಾತಕಿಗಳ ಸಹಚರರನ್ನು ದಸ್ತಗಿರಿ ಮಾಡಿ ಅವರಿಂದ ೨ ಕಾರು ಹಾಗೂ ಮೊಬೈಲ್ ಪೋನ್ ಗಳು ಮತ್ತು ವಿವಿಧ ಕಂಪೆನಿಗಳ ಸಿಮ್ ಕಾರ್ಡ್ ಗಳು ಸೇರಿದಂತೆ ಒಟ್ಟು ಮೌಲ್ಯ ಸುಮಾರು ೩,೪೦೦ ದ ಸೋತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಡಾ| ಸುಬ್ರಯಣೇಶ್ವರ ರಾವ್ ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಅವೇರಿ ಜಂಕ್ಷನ್ ಕಡೆಗೆ ಬರುತ್ತಿದ್ದ ಕೆ.ಎ-೧೯-ಎಂಎ-೪೨೯೦ ನಂಬ್ರದ ಮಾರುತಿ ಒಮ್ನಿ ಕಾರನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಜಯಾನಂದ ಗಾಣಿಗ ಹಾಗೂ ಚಂದ್ರಹಾಸ.ಕೆ.ಮೂಲ್ಯ ಎಂಬವರನ್ನು ಬಂದಿಸಿ ಅವರಿಂದ ಮಾರುತಿ ಒಮ್ನಿ ಕಾರು ಹಾಗೂ ವಿವಿಧ ಕಂಪೆನಿಗಳ ೫ ಮೊಬೈಲ್ ಪೋನ್ ಗಳು ಹಾಗೂ ಸಿಮ್ ಕಾರ್ಡ್ ಗಳನ್ನು ವಸಪಡಿಸಿಕೊಳ್ಳಾಗಿದೆ.ಸುಮಾರು ರೂ ೨,೫೩,೦೦೦ ಮೌಲ್ಯ ಗಳ ಸೊತ್ತುಗಳನ್ನು ಇವರಿಂದ ಸ್ವಾದೀನ ಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಳಿಕ ಇಬ್ಬರು ಆರೋಪಿಗಳು ನೀಡಿದ ಮಾಹಿತಿಯಂತೆ ಇಂದು ಬೆಳ್ಳಿಗೆ ಕೆ.ಸಿ.ರೋಡಿನ ಕೆ.ಸಿ ನಗರದ ಬಳಿ ಅಬ್ದುಲ್ ಲತೀಫ್ ಎಂಬಾತನನ್ನು ಅವನು ಪ್ರಯಾಣಿಸುತ್ತಿದ್ದ ಜಿಎ-೦೧-ಇ-೨೮೭೩ ನಂಬ್ರದ ಮಾರುತಿ ಅಲ್ಟೋ ಕಾರು ಸಮೇತ ಬಂದಿಸಲಾಗಿದ್ದು, ಅವನಲ್ಲಿದ್ದ ಮೊಬೈಲ್ ಪೋನ್ ಹಾಗೂ ಸಿಮ್ ಕಾರ್ಡ್ ಮತ್ತು ಅವನು ಹೊಂದಿದ್ದ ಪಾಸ್ ಪೊರ್ಟ್ ನಂಬ್ರ ಇ ೩೯೦೧೭೬೦ ನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು ರೂ ೫೧ ಸಾವಿರ ಎಂದು ಅವರು ತಿಳಿಸಿದರು.
ಇವರಲ್ಲಿ ಜಯಾನಂದ ಗಾಣಿಗ ಎಂಬಾತ ಕುಖ್ಯಾತ ರೌಡಿ ಅಗಿದ್ದು ಭೂಗತ ಪಾತಕಿಗಳ ಸಂಪರ್ಕ ಹೊಂದಿದ್ದ ಅಪಾಯಕಾರಿ ಪಾತಕಿ, ಹಾಗೂ ಕೊಲೆ, ಸುಲಿಗೆ, ದರೋಡೆಗಳಂತಹ ಕ್ರತ್ಯಗಳನ್ನು ಮಾಡಿರುವಂತವನಾಗಿರುತ್ತಾನೆ.
ಮೂರು ಅರೋಪಿಗಳು ತಮ್ಮನ್ನು ಕರ್ನಾಟಕ ರಕ್ಷಣಾ ವೇದಿಕೆಯ ಸಮರಸೇನೆ ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಎಂದು ಪರಿಚಯಿಸಿ ಕೊಂಡು ಸುಮಾರು ದಿವಸಗಳಿಂದ ಮಂಗಳೂರು ಹಾಗೂ ಮುಲ್ಕಿ ಉದ್ಯಮಿಗಳಿಗೆ ವಿವಿಧ ಸಿಮ್ ಕಾರ್ಡ್ ಗಳನ್ನು ಬಳಸಿ ಹಫ್ತಾ ವಸೂಲಿಗೆ ಬೆದರಿಕೆ ಕರೆಗಳನ್ನು ಮಾಡಿತ್ತಿದ್ದರು ಎಂದು ಎಸ್ಪಿ ತಿಳಿಸಿದರು.
ಆಡಿಷನಲ್ ಎಸ್ಪಿ ಅಮಿತ್ ಸಿಂಗ್ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಚರಣೆಯಲ್ಲಿ ಬಂದರು ಠಾಣೆ ಇನ್ ಸ್ಪೆಕ್ಟರ್ ವಿನಯಾ.ಎ.ಗಾಂವಕರ್, ಸಬ್ ಇನ್ ಸ್ಪೆಕ್ಟರ್ ಕೆ.ಆರ್.ಮಂಜುನಾಥ್, ಎ.ಎಸ್.ಐ ಪುರುಷೋತ್ತಮ, ಎ.ಎಸ್.ಐ ಯೊಗೀಶ್ ಹಾಗೂ ಕಾನ್ಸ್ ಟೇಬಲ್ ಗಳಾದ ಬಾಲಕ್ರಷ್ಣ, ಜಯಂತ. ಸೀತಾರಾಮ, ಚಂದ್ರ ಶೇಖರ, ಲಕ್ಷ್ಮಣ, ಜಯರಾಮ, ಪ್ರವೀಣ್, ರಾಧಕ್ರಷ್ಣ ಮೊದಲಾದವರು ಪಾಲ್ಗೋಂಡಿದ್ದರು.
ಆಡಿಷನಲ್ ಎಸ್ಪಿ ಅಮೀತ್ ಸಿಂಗ್ ಹಾಗೂ ವಿವಿಧ ಇಲಾಖೆಗಳ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಂಧಿತರ ವಿವರ:
1, ಜಯಾನಂದ ಗಾಣಿಗ, ತಂದೆ: ಬಾಬು , ಸ್ಥಳ: ಮಂಜೇಶ್ವರ ಹೊಸಬೆಟ್ಟು ಗ್ರಾಮದ ಚರ್ಚ್ ಕಂಪೌಂಡ್, ಕಾಸರಗೋಡು ಜಿಲ್ಲೆ.
2, ಚಂದ್ರಹಾಸ.ಕೆ.ಮೂಲ್ಯ, ಸ್ಥಳ: ಚಂದು ಮೂಲ್ಯ ಕಂಪೌಂಡ್ ಅಶೋಕನಗರ, ಮಂಗಳೂರು.
3, ಅಬ್ದುಲ್ ಲತೀಫ್, ಸ್ಥಳ: ಕೆ.ಸಿ.ರೋಡ್, ತಲಪಾಡಿ, ಮಂಗಳೂರು.
ವಾಹನಗಳಲ್ಲಿ ರಕ್ಷಣ ವೇದಿಕೆ ಬಿತ್ತಿಪತ್ರ:
ಬಂಧಿತರ ವಾಹನಗಳಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ಹಾಗೂ ಅದರ ರಾಜ್ಯಾಧ್ಯಕ್ಷರ ಚಿತ್ರವಿರುವ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿತ್ತು.
(ವಿಶೇಷ ವರದಿ/ಚಿತ್ರ : ಸತೀಶ್ ಕಾಪಿಕಾಡ್)
ಸೌಜನ್ಯ:ಗಲ್ಫ್ ಕನ್ನಡಿಗ